ಬಳ್ಳಾರಿ: ಮಹಾನಟ ಬಳ್ಳಾರಿ ರಾಘವರ 80ನೇ ಪುಣ್ಯಸ್ಮರಣೆಯನ್ನು ನಗರದ ಬಳ್ಳಾರಿ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ಆಚರಿಸಲಾಯಿತು.

ನಿವೃತ್ತ ಉಪನ್ಯಾಸಕ ಎನ್. ಬಸವರಾಜ್ ಮಾತನಾಡಿ, ‘ರಾಘವರು ನಾಟಕ ಕಲೆಯ ಮೂಲಕ ಸಮಾಜ ಪರಿವರ್ತನೆಗೆ ಕೊಡುಗೆ ನೀಡಿದ ಮಹಾನ್ ಕಲಾವಿದರು. ಸ್ತ್ರೀಯರ ಪಾತ್ರಗಳನ್ನು ಸ್ತ್ರೀಯರೇ ನಿರ್ವಹಿಸಬೇಕು ಎಂಬ ಅವರ ಅಭಿಪ್ರಾಯ ಅತ್ಯಂತ ಸೂಕ್ತವಾದದು. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದರು ಎಂದು ತಿಳಿಸಿದರು.

‘ಮಹಾತ್ಮ ಗಾಂಧಿ, ಸರೋಜಿನಿ ನಾಯ್ಡು, ರವೀಂದ್ರನಾಥ ಟಾಗೋರ್ ಮುಂತಾದವರು ಅವರ ನಾಟಕಗಳನ್ನು ಮೆಚ್ಚಿಕೊಂಡಿದ್ದರು. ರಾಘವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಬೇಕು’ ಎಂದು ಆಗ್ರಹಿಸಿದರು.

ಬಳಿಕ ‘ರೈತರ ಧ್ವನಿ’ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಅಧ್ಯಕ್ಷ ಕೆ ಕೊಟೆಶ್ವರ ರಾವ್, ಉಪಾಧ್ಯಕ್ಷ ರಾದ ಎಚ್ ವಿಷ್ಣುವರ್ಧನ್ ರೆಡ್ಡಿ, ಬಾಣಾಪುರ ರಮೇಶ ಗೌಡ, ಚೆಲ್ಲಾ ಅಮರೇಂದ್ರ ನಾಥ ಚೌದರಿ, ಜಿ. ಆರ್. ವೆಂಕಟೇಶಲು, ಕೆ ಪೊಂಪನಗೌಡ, ಬಿ.ಎಂ ಬಸವರಾಜ, ಸುರೇಂದ್ರ ಬಾಬು, ಪಿ.ಶ್ರೀನಿವಾಸಲು, ಕೃಷ್ಣ, ಶೇಷ ರೆಡ್ಡಿ, ರಮಣಪ್ಪ ಭಜಂತ್ರಿ ಹಾಗೂ ಕಲಾವಿದರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-25-1190702721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.