ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಡಿಜಿಟಲ್ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸುವ ಎರಡು ಪ್ರಮುಖ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿರುವ ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್ಸಿ)’ವು ಗಣಿ ಬಾಧಿತ ಪ್ರದೇಶಗಳಲ್ಲಿ ಗ್ರಾಮೀಣ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಪ್ರಯತ್ನಕ್ಕೆ ಬೆಂಬಲ ನೀಡಿದೆ.

ಕೆಎಂಇಆರ್ಸಿಯ ‘ಗಣಿಗಾರಿಕೆ ಪರಿಣಾಮ ವಲಯದ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್)’ಗಳ 27ನೇ ಸಭೆಯಲ್ಲಿ ₹14.40 ಕೋಟಿ ವೆಚ್ಚದ ಈ ಎರಡು ಪ್ರಸ್ತಾವನೆಗಳಿಗೆ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರ ನೇತೃತ್ವದ ಮೇಲುಸ್ತುವಾರಿ ಪ್ರಾಧಿಕಾರ ಸಮ್ಮತಿ ನೀಡಿದೆ.

ಮಾರ್ಚ್ 11ರಂದು ನಡೆದ ಮೇಲುಸ್ತುವಾರಿ ಪ್ರಾಧಿಕಾರದ ಸಭೆಯ ನಡಾವಳಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಸಭೆಯಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆಯಾಗಿರುವುದು ತಿಳಿದುಬಂದಿದೆ.

ಗ್ರಾಮೀಣ ಡಿಜಿಟಲ್ ಗ್ರಂಥಾಲಯ ಯೋಜನೆಯನ್ನು ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್’ ಇಲಾಖೆ ಜಾರಿಗೆ ತರುತ್ತಿದೆ. ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳಲ್ಲಿ ಒಟ್ಟು 31 ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯ ಸಂಕೀರ್ಣಗಳನ್ನು ನಿರ್ಮಿಸುವುದಾಗಿ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

₹4.90 ಕೋಟಿ ವೆಚ್ಚದಲ್ಲಿ ಬಳ್ಳಾರಿ ತಾಲ್ಲೂಕಿನಲ್ಲಿ 12 ಗ್ರಂಥಾಲಯಗಳು, ಸಂಡೂರು ತಾಲ್ಲೂಕಿನಲ್ಲಿ ₹9.50 ಕೋಟಿ ವೆಚ್ಚದಲ್ಲಿ 19 ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸುವುದಾಗಿ ಇಲಾಖೆ ತಿಳಿಸಿದೆ.

ಗ್ರಂಥಾಲಯಗಳ ಜೊತೆಗೆ ಓದುವ ಕೊಠಡಿ, ಕಂಪ್ಯೂಟರ್ ಲ್ಯಾಬ್, ಶಿಶುವಿಹಾರ, ಉದ್ಯಾನ, ಪುಸ್ತಕ, ಡಿಜಿಟಲ್ ಕಲಿಕಾ ಪರಿಕರ, ಪೀಠೋಪಕರಣ ಮತ್ತು ಒಳಾಂಗಣ ಆಟೋಪಕರಣಗಳನ್ನು ಯೋಜನೆ ಒಳಗೊಂಡಿದೆ.

ಜಿಲ್ಲೆಗೆ ವಿಸ್ತರಣೆ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಯೋಜನೆಯನ್ನು ವಿಸ್ತರಿಸುವ ಗುರಿಯನ್ನು ಜಿಲ್ಲಾಡಳಿತ ಹೊಂದಿದ್ದು, ಗಣಿಗಾರಿಕೆ ನಡೆಯದ ಜಿಲ್ಲೆಯ ಇತರ ತಾಲ್ಲೂಕುಗಳಿಗೂ ಇದೇ ರೀತಿಯ ಸವಲತ್ತು ಒದಗಿಸಬೇಕೆಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಸಭೆಯಲ್ಲಿ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಲುಸ್ತುವಾರಿ ಪ್ರಾಧಿಕಾರ ಜಿಲ್ಲೆಯ ಇತರ ತಾಲ್ಲೂಕುಗಳಿಗೂ ಹೆಚ್ಚುವರಿ ಪ್ರಸ್ತಾವನೆಗಳನ್ನು ಸಲ್ಲಿಸಲು ಅನುಮತಿ ನೀಡಿತು.

ಗ್ರಾಮೀಣ ಡಿಜಿಟಲ್ ಗ್ರಂಥಾಲಯಗಳ ಅಭಿವೃದ್ಧಿ ಕುರಿತ ವಿವರವಾದ ಚರ್ಚೆಯ ಬಳಿಕ ಮೇಲುಸ್ತುವಾರಿ ಪ್ರಾಧಿಕಾರವು ಎರಡೂ ಪ್ರಸ್ತಾವನೆಗಳನ್ನು ಅನುಮೋದಿಸಿತು.

ಯೋಜನೆಗಳ ಮೇಲ್ವಿಚಾರಣೆಗೆ ಏಜೆನ್ಸಿ

‘ಗಣಿಗಾರಿಕೆ ಪರಿಣಾಮ ವಲಯದ ಸಮಗ್ರ ಪರಿಸರ ಯೋಜನೆಯ ಕಾಮಗಾರಿಗಳಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ತೃತೀಯ ಪಕ್ಷದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ಕೆಎಂಇಆರ್ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ ಬಿಜ್ಜೂರು ಸಭೆಗೆ ತಿಳಿಸಿದರು.

‘ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ಉನ್ನತಾಧಿಕಾರ ಸಮಿತಿ ಶಿಫಾರಸಿನಂತೆ ನೇಮಕಗೊಂಡಿರುವ ಈ ಏಜೆನ್ಸಿಗಳು (ಬ್ಯೂರೋ ವೆರಿಟಾಸ್ ಮತ್ತು ಗ್ರೀನ್ ಡಿಸೈನ್ ಆ್ಯಂಡ್ ಎಂಜಿನಿಯರಿಂಗ್) ಕಾಮಗಾರಿಗಳ ಮೌಲ್ಯಮಾಪನದಲ್ಲಿ ತೊಡಗಿವೆ. ಈ ಸಂಸ್ಥೆಗಳು ಈ ವರ್ಷ 13 ಕಾಮಗಾರಿಗಳನ್ನು ತಪಾಸಣೆ ಮಾಡಿವೆ. ನ್ಯೂನತೆಗಳನ್ನು ಪರಿಹರಿಸಲು ಕಟ್ಟುನಿಟ್ಟಾದ ಕಾರ್ಯವಿಧಾನಗಳನ್ನು ಸೂಚಿಸಿವೆ’ ಎಂದು ತಿಳಿಸಿದರು.

ಅಲ್ಲದೆ, ಯೋಜನೆಗಳನ್ನು ಜಾರಿಗೊಳಿಸುವಾಗ ಈ ಸ್ವತಂತ್ರ ಏಜೆನ್ಸಿಗಳ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸಬೇಕೆಂದು ಇಲಾಖೆಗಳಿಗೆ ತಿಳಿಸಿರುವುದಾಗಿ ಮೇಲುಸ್ತುವಾರಿ ಪ್ರಾಧಿಕಾರದ ಗಮನಕ್ಕೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.