ಬಳ್ಳಾರಿ: ಕವಿ ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನಕ್ಕೆ 2025ರ ಸಂಗಂ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹಿರಿಯ ಕತೆಗಾರ ಪ್ರೊ. ಅಮರೇಶ ನುಗಡೋಣಿ ಘೋಷಿಸಿದರು.

ನಗರದ ಜ್ಞಾನಾಮೃತ ಕಾಲೇಜು ಸಭಾಂಗಣದಲ್ಲಿ ಸಂಗಂ ಟ್ರಸ್ಟ್ ಶನಿವಾರ ‘ಸಂಗಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ-ತೆಲುಗು ನುಡಿಸಾಂಗತ್ಯ ಕಾರ್ಯಕ್ರಮ ನಡೆಯಿತು. ಪ್ರಶಸ್ತಿ ಸುತ್ತಿನಲ್ಲಿ ಅಮರೇಶ ನುಗಡೋಣಿ ಅವರು ಪ್ರಶಸ್ತಿ ವಿಜೇತರ ಹೆಸರು ಘೋಷಿಸಿದರು.

ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪ್ರಮಾಣಪತ್ರ ಒಳಗೊಂಡಿದೆ.

ಬಳಿಕ ಮಾತನಾಡಿದ ಅವರು, ‘ಕಾವ್ಯದ ಸೂಕ್ಷ್ಮತೆ ದಕ್ಕಿಸಿಕೊಂಡಲ್ಲಿ ಕವಿಯೊಬ್ಬ ಕಾವ್ಯ ಕಟ್ಟಬಲ್ಲ. ಆದ್ದರಿಂದ ಕಾವ್ಯದ ಸೆಲೆ ಎಂದಿಗೂ ಬತ್ತಬಾರದು. ಇಂತಹ ಕಾರ್ಯಕ್ರಮಗಳು ನಾಡಿನಲ್ಲಿ ನಡೆಯಲಿ’ ಎಂದು ಆಶಿಸಿದರು.

ಸಂಗಂ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಮಾತನಾಡಿದರು. ಪ್ರಶಸ್ತಿಗೆ 162 ಕವನ ಸಂಕಲನಗಳು ಬಂದಿದ್ದವು. ಇವುಗಳಲ್ಲಿ ಅಂತಿಮವಾಗಿ ಐದು ಸಂಕಲನ ಆಯ್ಕೆ ಮಾಡಿ ಒಂದಕ್ಕೆ ಪ್ರಶಸ್ತಿ ಘೋಷಿಸಲಾಯಿತು.

ತೀರ್ಪುಗಾರರಾಗಿ ಜಿ.ಪಿ. ಬಸವರಾಜ, ಸಬಿತಾ ಬನ್ನಾಡಿ, ರಾಜೇಂದ್ರ ಪ್ರಸಾದ್ ಕಾರ್ಯ ನಿರ್ವಹಿಸಿದ್ದರು.

ಸಂಗಂ ಜಂಟಿ ಕಾರ್ಯದರ್ಶಿ ಡಾ. ಪುಷ್ಪಲತ ಹಾಗೂ ಸಂಗಂ ಪ್ರಶಸ್ತಿಯ ಅಂತಿಮ ಹಂತದಲ್ಲಿ ಕವಿಗಳಾದ ಶೋಭಾನಾಯಕ, ಸವಿರಾಜ್ ಆನಂದೂರು, ಕಮಲಾಕರ್ ಕಡವೆ ವೇದಿಕೆಯಲ್ಲಿ ಇದ್ದರು.

ಕನ್ನಡ-ತೆಲುಗು ನುಡಿಸಾಂಗತ್ಯ ಹಿತಕರ: ಓ.ಎಲ್. ನಾಗಭೂಷಣಸ್ವಾಮಿ

ಬಳ್ಳಾರಿ: ‘ಭಾಷೆ ಮತ್ತು ಭೌಗೋಳಿಕ ಪ್ರದೇಶಗಳಿಗೆ ಗಡಿ ಇರಬಾರದು. ಅದರಲ್ಲೂ ಕನ್ನಡ ಹಾಗೂ ತೆಲುಗು ಭಾಷೆಗಳ ನಡುವಿನ ಸಾಂಗತ್ಯ ಅತ್ಯಂತ ಹಿತಕರವಾದುದು’ ಎಂದು ಹಿರಿಯ ವಿಮರ್ಶಕ ಒ.ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.

‘ಸಂಗಂ ಟ್ರಸ್ಟ್’ನಿಂದ ನಡೆದ ಕನ್ನಡ-ತೆಲುಗು ನುಡಿಸಾಂಗತ್ಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಕವಿಯಾದವನು ಕೇವಲ ಸ್ವಂತ ಅನುಭವಕ್ಕೆ ಸೀಮಿತವಾಗದೆ, ಸಮಾಜದ ಸುಖ-ದುಃಖಗಳನ್ನು ತನ್ನದಾಗಿಸಿಕೊಂಡಾಗ ಮಾತ್ರ ಉತ್ತಮ ಕಾವ್ಯ ಸೃಷ್ಟಿಯಾಗಲು ಸಾಧ್ಯ’ ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.

ನ್ಯಾಷನಲ್ ಬುಕ್ ಟ್ರಸ್ಟ್ನ ಅಧಿಕಾರಿ ಡಾ.ಪತ್ತಿಪಾಕ ಮೋಹನ್ ಮಾತನಾಡಿ, ‘ತೆಲುಗು ಮೂಲದ ಪಂಪ ಕನ್ನಡದ ಆದಿಕವಿಯಾದದ್ದು ಭಾಷಾ ಬಾಂಧವ್ಯಕ್ಕೆ ಸಾಕ್ಷಿ’ ಎಂದರು. ನಿವೃತ್ತ ಉಪನ್ಯಾಸಕ ಆರ್. ದೇವಣ್ಣ ಅವರು ಬಸವಣ್ಣ, ಶ್ರೀಕೃಷ್ಣದೇವರಾಯ ಹಾಗೂ ಪುರಂದರದಾಸರ ಕೊಡುಗೆಗಳನ್ನು ಸ್ಮರಿಸಿದರು.

‘ಸಾಹಿತ್ಯಶ್ರೀ’ ಪ್ರಶಸ್ತಿ ಪುರಸ್ಕೃತ ನಿಷ್ಠಿರುದ್ರಪ್ಪ ಮತ್ತು ಅಬ್ದುಲ್ ಹೈ ತೋರಣಗಲ್ಲು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಡಾ. ಅರವಿಂದ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ನಾಗಣ್ಣ ಕಿಲಾರಿ ಅವರ ‘ಕಾಯಗುಡ್ಡ’ ಸೇರಿದಂತೆ ಮೂರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಪಾಲಿಕೆ ಮೇಯರ್ ಕೆ. ಗಾದೆಪ್ಪ, ಕೆ. ಶಿವಲಿಂಗಪ್ಪ ಹಂದಿಹಾಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-25-1798343417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.