ಸಿರುಗುಪ್ಪ: ಇಲ್ಲಿನ 24ನೇ ವಾರ್ಡನ್ ಹುಚ್ಚೀರಪ್ಪ ಮಠದ ಬಳಿ ಮನೆಯಲ್ಲಿ ಕಟ್ಟಿದ್ದ ಸೀರೆಯ ಜೋಳಿಗೆಗೆ ಸಿಲುಕಿ 11 ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಮೃತಪಟ್ಟಿದ್ದು, ಶವಪರೀಕ್ಷೆ ನಡೆಸಲು ವೈದ್ಯರು ಹಿಂದೇಟು ಹಾಕಿದ್ದರಿಂದ ಗೊಂದಲ ಉಂಟಾಯಿತು.

ಗೋವಿಂದಪ್ಪ ಅವರ ಪುತ್ರಿ ನಂದಿತಾ ಮೃತ ಬಾಲಕಿ. ಶನಿವಾರ ಸಂಜೆ 5 ಗಂಟೆಗೆ ಮೃತಪಟ್ಟಿದ್ದ ಬಾಲಕಿಯ ಶವವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. 11ವರ್ಷದ ಒಳಗಿನ ಬಾಲಕಿಯಾಗಿರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ, ಬಳ್ಳಾರಿಯ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವಿಮ್ಸ್)ಕ್ಕೆ ತೆಗೆದುಕೊಂಡು ಹೋಗುವಂತೆ ಕರ್ತವ್ಯ ನಿರತ ವೈದ್ಯೆ ಅಮೀನಾ ಹೇಳಿದರು.

‘ಬಾಲಕಿ ಆಟವಾಡುತ್ತ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆ ಮಗುವಿನ ಮರಣೋತ್ತರ ಶಪ ಪರೀಕ್ಷೆ ಮಾಡಿಕೊಡುವಂತೆ ಮನವಿ ಪತ್ರ ನೀಡಿದರೂ ಶವ ಪರೀಕ್ಷೆ ಮಾಡದೇ ಆಸ್ಪತ್ರೆಯ ವೈದ್ಯಾಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಕಡೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗೆ ವಾಸ್ತವ ತಿಳಿಸಿದ ಬಳಿಕ ಶವ ಪರೀಕ್ಷೆ ಮಾಡಲು ವೈದ್ಯರು ಒಪ್ಪಿದ್ದಾರೆ ಎಂದು ಸಿಪಿಐ ಹನುಮಂತಪ್ಪ ಹೇಳಿದರು. ಶವ ಪರೀಕ್ಷೆ ವಿಳಂಬವಾದ ಕಾರಣ ಆಸ್ಪತ್ರೆಯ ಬಳಿ ನೂರಾರು ಮಂದಿ ಜಮಾಯಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-25-1253471042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.