ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಪಟ್ಟಣದ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಆರಿಕಾ ಅವರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದ ಅಂಕ ನಮೂದಿಸುವಲ್ಲಿ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ.

ಪರೀಕ್ಷೆಯಲ್ಲಿ 58 ಅಂಕ ಗಳಿಸಿದ್ದ ಆರಿಕಾಗೆ ಕೇವಲ 17 ಅಂಕ ನೀಡಲಾಗಿತ್ತು. ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದಾಗ ಈ ತಪ್ಪು ಗೊತ್ತಾಗಿದೆ. ವಿದ್ಯಾರ್ಥಿನಿ ಮರು ಮೌಲ್ಯಮಾಪನಕ್ಕೆ ದಂಡ ತೆತ್ತು ಅರ್ಜಿ ಸಲ್ಲಿಸಬೇಕಾಗಿದೆ.

ಮೌಲ್ಯಮಾಪಕರ ನಿರ್ಲಕ್ಷ್ಯದಿಂದ 41 ಅಂಕಗಳ ವ್ಯತ್ಯಾಸವಾಗಿದೆ. ಇದು ಸರಿಯಾದಲ್ಲಿ ಆರಿಕಾ 538 ಅಂಕ ಗಳಿಸಲಿದ್ದಾರೆ ಎಂದು ಮುಖ್ಯ ಶಿಕ್ಷಕ ಮಂಜುನಾಥ ತಿಳಿಸಿದ್ದಾರೆ.

ಮೊದಲು 6, ಈಗ 64: (ತಿಕೋಟಾ (ವಿಜಯಪುರ) ವರದಿ): ಎಸ್ಎಸ್ಎಲ್ಸಿ ಪರೀಕ್ಷೆ ಇಂಗ್ಲಿಷ್ ವಿಷಯದಲ್ಲಿ 06 ಅಂಕ ಫಲಿತಾಂಶ ಪ್ರಕಟವಾಗಿದ್ದ, ಬಿಜ್ಜರಗಿ ಗ್ರಾಮದ ಮಾಣಿಕೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾ ಮಾದೇವ ಚೌಧರಿ ಅವರು ಉತ್ತರಪತ್ರಿಕೆ ಛಾಯಾಪ್ರತಿ ಪಡೆದಾಗ 64 ಅಂಕ ಪಡೆದಿರುವುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.