ಬಳ್ಳಾರಿ: ‘ಬಳ್ಳಾರಿ ಸೈಕ್ಲಿಸ್ಟ್ಸ್ ಮತ್ತು ರನ್ನರ್ಸ್ ಫೌಂಡೇಷನ್ (ಬಿಸಿಆರ್ಎಫ್) ವತಿಯಿಂದ ‘ಸ್ಟೀಲ್ ಸಿಟಿ ರನ್’ ಐದನೇ ಆವೃತ್ತಿಯನ್ನು ಆಗಸ್ಟ್ 2ರಂದು ಆಯೋಜಿಸಲಾಗಿದೆ’ ಎಂದು ಫೌಂಡೇಷನ್ ಅಧ್ಯಕ್ಷ ಎಂ. ತಿಪ್ಪಾರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ನಾಲ್ಕು ಆವೃತ್ತಿಗಳು ಯಶಸ್ಸು ಕಂಡಿವೆ. ವೃತ್ತಿಪರ ಓಟಗಾರರಿಗಾಗಿ ಇದೇ ಮೊದಲ ಬಾರಿಗೆ 16 ಕಿ.ಮೀ (10 ಮೈಲರ್) ವಿಭಾಗವನ್ನು ಪರಿಚಯಿಸಲಾಗುತ್ತಿದೆ. ಪ್ರತಿ ವರ್ಷದಂತೆ 10 ಕಿ.ಮೀ ಮತ್ತು 5 ಕಿ.ಮೀ ಟೈಮ್ಡ್ ರನ್ ಹಾಗೂ ಸಾರ್ವಜನಿಕರಿಗಾಗಿ 3 ಕಿ.ಮೀ ಫನ್ ರನ್ ಜರುಗಲಿದೆ’ ಎಂದರು.

‘2022ರಲ್ಲಿ 1,100 ಓಟಗಾರರಿಂದ ಆರಂಭವಾದ ಈ ಅಭಿಯಾನವು ಕಳೆದ ವರ್ಷ 4,200ಕ್ಕೂ ಅಧಿಕ ಜನರನ್ನು ಸೆಳೆಯುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕ್ರೀಡೆಯಾಗಿ ಹೊರಹೊಮ್ಮಿದೆ. ಈ ಬಾರಿ ವಿಜೇತರಿಗೆ ವಿವಿಧ ವಿಭಾಗಗಳಲ್ಲಿ ಒಟ್ಟು ₹7 ಲಕ್ಷಕ್ಕೂ ಅಧಿಕ ಮೊತ್ತದ ನಗದು ಬಹುಮಾನ ವಿತರಿಸಲಾಗುವುದು’ ಎಂದು ತಿಳಿಸಿದರು.

‘ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಿರುವ ಈ ಓಟದಲ್ಲಿ ಪಾಲ್ಗೊಳ್ಳಲು ಆಸಕ್ತರು www.steelcityrun.com ವೆಬ್ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು’ ಎಂದರು.

ಫೌಂಡೇಷನ್ ಉಪಾಧ್ಯಕ್ಷ ನರೇಂದ್ರ ಗಾಂಧಿ, ಕಾರ್ಯದರ್ಶಿ ವಿಕಾಸ್ ಜೈನ್, ಪದಾಧಿಕಾರಿಗಳು ಹಾಗೂ ವೈದ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-25-771211993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.