ತೆಕ್ಕಲಕೋಟೆ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಕೋಟೆಗೆ ಹಂಪಿ, ಕಮಲಾಪುರದ ರಾಜ್ಯ ಪುರಾತತ್ವ ಇಲಾಖೆ ಜಿಲ್ಲಾ ಪುರಾ ತತ್ವ ಸರ್ವೇಕ್ಷಣಾಧಿಕಾರಿ ಹಾಗೂ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಕೋಟೆಯ ಬಹುತೇಕ ಭಾಗ ಸುಸ್ಥಿತಿಯಲ್ಲಿದ್ದರೂ ಪಶ್ಚಿಮದ ಕೋಟೆಗೋಡೆ ಸುಮಾರು 100 ಮೀಟರ್ ಕುಸಿದಿದೆ. ಗೋಡೆ ಸುತ್ತ ನಾಲ್ಕು ದಿಕ್ಕಿನಲ್ಲಿ ಗಿಡಮರ ಬೆಳೆದು ಶಿಥಿಲಾವಸ್ಥೆಗೆ ತಲುಪಿವೆ ಎಂಬುದನ್ನು ಸ್ಥಳೀಯ ಇತಿಹಾಸ ಸಂಶೋಧನಾರ್ಥಿ ಮನೋಹರ ಸಿ.ಎಂ ಸರ್ವೇಕ್ಷಣಾಧಿಕಾರಿಗಳ ಗಮನಕ್ಕೆ ತಂದರು.

ಪುರಾತತ್ವ ಸರ್ವೇಕ್ಷಣಾಧಿಕಾರಿ ಮಾತನಾಡಿ, ‘ಕೋಟೆಯು ಉತ್ತಮ ಸ್ಥಿತಿಯಲ್ಲಿದ್ದರೂ, ಗೋಡೆ ಹಾಗೂ ಬುರುಜುಗಳು ಶಿಥಿಲಾ ವಸ್ಥೆಗೆ ತಲುಪಿವೆ. ಇದರ ಸಂರಕ್ಷಣೆ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಈ ವೇಳೆ ಪುರಾತತ್ವ ಸಂರಕ್ಷಣೆ ಇಂಜನಿಯರ್ ಜೆ ಸತೀಶ್, ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-25-194127304

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.