ಕುರುಗೋಡು: ತಾಲ್ಲೂಕಿನ ವಿವಿಧೆಡೆ ಕಳವು ಮಾಡಿದ ಕಳ್ಳರನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಗುರುವಾರ ರಾತ್ರಿ ಕಬ್ಬಿಣದ ಸಲಾಕೆ, ಸ್ಕ್ರೂಟ್ರೈವರ್ಗಳನ್ನು ಹಿಡಿದು ಮೋಟರ್ ಬೈಕ್ನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹೊಸಪೇಟೆ ತಾಲ್ಲೂಕು ಕೊಂಡನಾಯಕನ ಹಳ್ಳಿ ಗ್ರಾಮದ ವಿ.ಪ್ರಭಾಕರ ಮತ್ತು ವಿ.ಮಹೇಶ್ ಎನ್ನುವ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಮನೆಕಳವು ಮಾಡಿದ ವಿಷಯ ಬೆಳಕಿಗೆಬಂದಿದೆ.

ಇವರು ಕುರುಗೋಡು ಪಟ್ಟಣದ ಕಂಪ್ಲಿ ರಸ್ತೆಯಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಿದ್ದರು.

ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿನ ವಿರುಪಾಕ್ಷಪ್ಪ ಅವರ ಮನೆಯಲ್ಲಿ 20 ಗ್ರಾಂ ಚಿನ್ನ ಮತ್ತು ₹ 5 ಸಾವಿರ ನಗದು, ತಾಲ್ಲೂಕಿನ ಬಾದನಹಟ್ಟಿ ಗ್ರಾಮದ ಗುರಳ್ಳಿ ಹನುಮಂತಪ್ಪ ಅವರ ಮನೆಯಲ್ಲಿ 66 ಗ್ರಾಂ ಚಿನ್ನ ಮತ್ತು 198 ಗ್ರಾಂ ಬೆಳ್ಳಿ, ಬಳ್ಳಾರಿ ನಗರದ ಸಂಗನಕಲ್ಲು ರಸ್ತೆ ಮತ್ತು ಗಂಗಾವತಿ ತಾಲ್ಲೂಕಿನ ವಡ್ರಟ್ಟಿ ಗ್ರಾಮದ ಮನೆಯಲ್ಲಿ ಕಳವು ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅವರಿಂದ 86 ಗ್ರಾಂ ಚಿನ್ನ ಮತ್ತು 189 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಪ್ರಸಾದ್ ಗೋಖಲೆ ಮಾರ್ಗದರ್ಶನದಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ್ ಮತ್ತು ಪಿಎಸ್ಐ ಸುಪ್ರಿತ್, ಸಿಬ್ಬಂದಿ ಕೆ.ಶ್ರೀನಿವಾಸ, ವಿನಯ್, ಶಿವರಾಯಪ್ಪ, ನವೀನ್, ಸುರೇಶ್ ಮತ್ತು ರಾಜಶೇಖರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.