ಕಾರ್ಮಿಕ ದಿನಾಚರಣೆ: ಟ್ರ್ಯಾಕ್ಟರ್ ಮುಗುಚಿ ಗಾಯಗೊಂಡ ಕಾರ್ಮಿಕರು

ತೆಕ್ಕಲಕೋಟೆ: ರಾಷ್ಟ್ರೀಯ ಹೆದ್ದಾರಿ 150ಎ ಸಿಂಧಿಗೇರಿ ಗ್ರಾಮದಿಂದ ಶಾನವಾಸಪುರ ಗ್ರಾಮಕ್ಕೆ ಬುನಾದಿ ಕಲ್ಲು (ಬೋಡ್ರಸ್) ತುಂಬಿಕೊಂಡು ತೆರಳುತ್ತಿದ್ದ ಟ್ರ್ಯಾಕ್ಟರ್ ಮುಗುಚಿದ ಘಟನೆ ಶುಕ್ರವಾರ ನಡೆದಿದೆ.

ಬುನಾದಿ ಕಲ್ಲು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಆರು ಕಾರ್ಮಿಕರು ಕುಳಿತಿದ್ದರು. ಆದರೆ ಮಾರ್ಗ ಮಧ್ಯೆ ಟ್ರ್ಯಾಲಿಯ ಲಿಫ್ಟ್ ಇದ್ದಕ್ಕಿದಂತೆ ಮೇಲೆತ್ತಿದ ಕಾರಣ ಕುಳಿತಿದ್ದ ಕಾರ್ಮಿಕರ ಮೇಲೆ ಕಲ್ಲುಗಳು ಬಿದ್ದಿವೆ.

ಕಾರ್ಮಿಕ ಸುರೇಂದ್ರ ಇವರ ಎರಡು ಕಾಲು ಸ್ಥಳದಲ್ಲೆ ಮುರಿದಿದ್ದು, ಮತ್ತೊಬ್ಬ ಕಾರ್ಮಿಕ ಅಂಬರೀಶ್ ಅವರ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿದೆ. ಉಳಿದ ಕೂಲಿ ಕಾರ್ಮಿಕರಾದ ಶ್ರೀಕಾಂತ್, ಬಸವರಾಜ್, ಮಣಿಕಂಠ ಮತ್ತು ಶೇಖರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ. ಎಸ್ ಸಿದ್ದಪ್ಪ ತಕ್ಷಣ ಗಾಯಾಳುಗಳನ್ನು ಬಳ್ಳಾರಿಯ ಬಿಮ್ಸ್ ಆಸ್ಪತ್ರೆ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-25-1510630010

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.