ಬಳ್ಳಾರಿ: ಬಳ್ಳಾರಿ ನಗರದಲ್ಲಿರುವ ಪ್ರಮುಖ ವೃತ್ತಗಳಲ್ಲಿ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದ್ದು, ಅಪಘಾತಗಳ ತಾಣಗಳಾಗಿ ಮಾರ್ಪಾಡಾಗಿವೆ.

ಸಿಗ್ನಲ್ಗಳು ಇಲ್ಲದೇ ಇರುವುದು, ವಾಹನಗಳ ಅಡ್ಡಾದಿಡ್ಡಿ ಸಂಚಾರ, ಒಂದು ದಿಕ್ಕಿನಿಂದ ಬರುವ ವಾಹನ ಇನ್ನೊಂದು ದಿಕ್ಕಿನವರಿಗೆ ಕಾಣದೇ ಇರುವುದು, ಕಿರಿದಾದ ರಸ್ತೆಗಳು, ಶಿಸ್ತಿಲ್ಲದ ಪಾರ್ಕಿಂಗ್ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಜಾಗಗಳು ಅಪಾಯಕಾರಿಯಾಗಿ ಪರಿಣಮಿಸಿವೆ.

ಬಳ್ಳಾರಿಯ ಹೃದಯ ಭಾಗ ಎನಿಸಿಕೊಂಡಿರುವ ಗವಿಯಪ್ಪ (ಮೋತಿ) ವೃತ್ತ, ಗಡಿಗಿ ಚೆನ್ನಪ್ಪ (ರಾಯಲ್) ವೃತ್ತ, ಕೌಲ್ ಬಜಾರ್ ವೃತ್ತಗಳಲ್ಲಿ ವಾಹನ ಚಾಲನೆ ಎಂಬುದು ಸವಾಲಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಪಾದಚಾರಿಗಳಿಗೂ ತೊಂದರೆ ಎದುರಾಗಿದೆ.

ಮೋತಿ ವೃತ್ತ ಸಿಗ್ನಲ್ ರಹಿತ ಜಂಕ್ಷನ್ ಆಗಿದ್ದು ಬೆಂಗಳೂರು ರಸ್ತೆ, ರೈಲ್ವೆ ಬ್ರಿಡ್ಜ್, ಜಿಲ್ಲಾಧಿಕಾರಿ ಕಚೇರಿ ರಸ್ತೆಗಳು ಈ ಜಾಗದಲ್ಲಿ ಕೂಡುತ್ತವೆ. ಇಲ್ಲಿ ಮೈಯೆಲ್ಲ ಕಣ್ಣಾಗಿಸಿಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಇದೆ. ಪ್ರತಿನಿತ್ಯ ಸಣ್ಣಪುಟ್ಟ ಅಪಘಾತಗಳು ಇಲ್ಲಿ ಸಾಮಾನ್ಯ.

ಇದೇ ವೃತ್ತದಲ್ಲಿ ವರ್ಷದ ಹಿಂದೆ ಕೆಕೆಆರ್ಟಿಸಿ ಬಸ್ವೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಹರಿದಿತ್ತು. ವ್ಯಕ್ತಿ ಗುರುತೂ ಪತ್ತೆಯಾಗದಂತೆ ಸ್ಥಳದಲ್ಲೇ ಸಾವಿಗೀಡಾಗಿದ್ದ. ಇತ್ತೀಚೆಗೆ ಹಣ್ಣಿನ ಅಂಗಡಿಗೆ ಬಸ್ ನುಗ್ಗಿತ್ತು. ಹೀಗಾಗಿ ಇಲ್ಲಿ ಪೊಲೀಸರ ನಿಯೋಜನೆ ಅಥವಾ ಸಿಗ್ನಲ್ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ, ಇಲ್ಲಿ ಸಿಗ್ನಲ್ ಅಳವಡಿಸಿದರೆ ರೈಲ್ವೆ ಬ್ರಿಡ್ಜ್ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಅಪಾಯವಿದೆ.

ಇನ್ನು ಮೊಹಮದೀಯ ಶಾಲೆ ಬಳಿಯ ವೃತ್ತದ್ದೂ ಇದೇ ಕತೆ. ಹೊಸಪೇಟೆ ರಸ್ತೆ ಪಕ್ಕದ ಸೇತುವೆಯಿಂದ ಬರುವ ವಾಹನಗಳು, ಕೌಲ್ ಬಜಾರ್ ರಸ್ತೆ, ರೇಡಿಯೊ ಪಾರ್ಕ್ ರಸ್ತೆಗಳು ಕೂಡುವ ಈ ವೃತ್ತದಲ್ಲಿಯೂ ಸಿಗ್ನಲ್ ಇಲ್ಲ. ಪೊಲೀಸರ ನಿರ್ವಹಣೆ ಇಲ್ಲ.

ಇನ್ನು ರಾಯಲ್ ಸರ್ಕಲ್ನಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಯಾವ ವಾಹನ ಯಾವ ದಿಕ್ಕಿನಿಂದ ಬರುತ್ತದೆ ಎಂಬುದೇ ತಿಳಿಯುವುದಿಲ್ಲ. ವೃತ್ತದಲ್ಲಿ ಬೃಹತ್ ಗಡಿಯಾರ ಗೋಪುರವಿದ್ದು, ರಸ್ತೆಗಳನ್ನೇ ಮರೆ ಮಾಡುತ್ತದೆ. ಈ ವೃತ್ತವನ್ನು ಸುತ್ತು ಹಾಕಿ ಮತ್ತೊಂದು ರಸ್ತೆಗೆ ಸೇರಿಕೊಳ್ಳಬೇಕಿದ್ದರೆ ಹರಸಾಹಸಪಡಬೇಕು. ಈ ವೃತ್ತ ಪಾದಚಾರಿಗಳಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ.

ಕೆಲ ದಿನಗಳ ಹಿಂದೆ ಈ ವೃತ್ತದಲ್ಲಿ ಡಾಂಬರು ಹಾಕಿ ರಸ್ತೆಯನ್ನು ಸಮತಟ್ಟು ಮಾಡಲಾಗಿದೆ. ಹೀಗಾಗಿ ವಾಹನಗಳು ಸರಾಗವಾಗಿ ಸಾಗುತ್ತವೆ. ಆದರೆ, ಅಪಾಯ ಮಾತ್ರ ತಪ್ಪಿಲ್ಲ

ಇಂದಿರಾ (ಸಂಗಂ) ವೃತ್ತದಲ್ಲಿ ಸಿಗ್ನಲ್ ಇದೆ. ಹೀಗಾಗಿ ಇಲ್ಲಿ ಅಂಥ ಸಮಸ್ಯೆ ಇಲ್ಲ. ಆದರೆ, ಸಿಗ್ನಲ್ ಇಲ್ಲದ ಸಂದರ್ಭಗಳಲ್ಲಿ ಇಲ್ಲಿಯೂ ಅದೇ ಸಮಸ್ಯೆ. ಇಲ್ಲಿಯಂತೆ ಎಲ್ಲ ವೃತ್ತಗಳಲ್ಲಿ ಸಿಗ್ನಲ್ ಅಳವಡಿಸಿದರೆ ಸಮಸ್ಯೆಗೆ ಬಗೆಹರಿಸಬಹುದು ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸರ್ಕಲ್ಗಳಲ್ಲಿ ಜೀಬ್ರಾ ಕ್ರಾಸ್ಗಳನ್ನು ಹಾಕಬೇಕು. ಜನರನ್ನು ಅಲ್ಲಿಯೇ ರಸ್ತೆ ದಾಟುವಂತೆ ಪೊಲೀಸರು ಸೂಚಿಸಬೇಕು. ಯಾವೆಲ್ಲ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಇದೆಯೋ, ಎಲ್ಲೆಲ್ಲಿ ಏಕಮುಖ ಸಂಚಾರ ಇದೆಯೋ ಅಲ್ಲಿ ಪೊಲೀಸರ ನಿಯೋಜನೆ ಇರಬೇಕು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-25-250181772

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.