ಬಳ್ಳಾರಿ: ‘ತುಂಗಭದ್ರ ಜಲಾಶಯದಲ್ಲಿ ದಶಕಗಳಿಂದ ಸಂಗ್ರಹವಾಗಿರುವ ಹೂಳಿನಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಂಠಿತಗೊಂಡಿದೆ. ಸರ್ಕಾರದ ಗಮನ ಸೆಳೆಯಲು ತುಂಗಭದ್ರ ರೈತ ಸಂಘದ ವತಿಯಿಂದ ಜೂನ್ 2ರಂದು ಸಾಂಕೇತಿಕವಾಗಿ ಹೂಳೆತ್ತುವ ಕಾರ್ಯ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಜೂನ್ 1ರಂದು ದರೂರು ವೀರಭದ್ರೇಶ್ವರ ದೇವಸ್ಥಾನ ಹಾಗೂ ಕೊಂಚಿಗೇರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, 105 ಟ್ರಾಕ್ಟರ್ಗಳೊಂದಿಗೆ ಕುರುಗೋಡು, ಕಂಪ್ಲಿ, ಕಮಲಾಪುರ ಹಾಗೂ ಹೊಸಪೇಟೆ ಮಾರ್ಗವಾಗಿ ಜಲಾಶಯದತ್ತ ಪ್ರಯಾಣ ಆರಂಭಿಸಲಾಗುವುದು.

ಜೂನ್ 2ರಂದು ಜಲಾಶಯದ ಗುಂಡಾ ಅರಣ್ಯದ ಪಕ್ಕದ ಪ್ರದೇಶದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೂಳೆತ್ತುವ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. 105 ಟ್ರಾಕ್ಟರ್ಗಳಿಗೆ ಜೆಸಿಬಿಗಳ ಮೂಲಕ ಡ್ಯಾಂನಲ್ಲಿನ ಹೂಳನ್ನು ತುಂಬಿಸಿ, ಹೊರತೆಗೆದು ‘ಹೂಳಿನ ಜಾತ್ರೆ’ ಮಾಡಲಾಗುವುದು. ಎರಡು ದಿನಗಳ ಕಾಲ ನಡೆಯುವ ಈ ಸಾಂಕೇತಿಕ ಹೋರಾಟದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಅವರು ಮನವಿ ಮಾಡಿದರು.

ಜಾತ್ರೆಯಲ್ಲಿ ಪಾಲ್ಗೊಳ್ಳುವ ಟ್ರಾಕ್ಟರ್, ಬೈಕ್ ಹಾಗೂ ಜೆಸಿಬಿ ವಾಹನಗಳಿಗೆ ಯಾವುದೇ ಅಡ್ಡಿಯಾಗದಂತೆ ಪೊಲೀಸ್, ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದ್ದು, ಅಧಿಕಾರಿಗಳು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ದರೂರು ಸಾಗರ್ ಗೌಡ, ಶ್ರೀಧರ್ ಗೌಡ, ಶಿವಯ್ಯ, ವೀರಭದ್ರ ನಾಯ್ಕ್, ಲಿಂಗಮೂರ್ತಿ, ವೀರನಗೌಡ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-25-1051623781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.