ಬಳ್ಳಾರಿ: ಚಿಕಿತ್ಸೆಗೆಂದು ವಿಮ್ಸ್ಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಗುರುವಾರ ಮಧ್ಯಾಹ್ನ ಪರಾರಿಯಾಗಿದ್ದು, ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಕ್ಸೊ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಹರಪನಹಳ್ಳಿ ಮೂಲದ ಅಣ್ಣಪ್ಪ ಪರಾರಿಯಾದವ. ಜೈಲಿನೊಳಗೆ ಮರದಿಂದ ಬಿದ್ದು ಗಾಯಗೊಂಡಿದ್ದ ಆನನ್ನು ಏ.21ರಂದು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಶೌಚಾಲಯಕ್ಕೆ ಹೋಗಿದ್ದ ಅಣ್ಣಪ್ಪ, ಕಿಟಕಿಯ ಗಾಜನ್ನು ಒಡೆದು ಅಲ್ಲಿಂದಲೇ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಜೈಲು ಆವರಣಕ್ಕೆ ಮೊಬೈಲ್: ಎಫ್ಐಆರ್

ಬಳ್ಳಾರಿ: ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಮೊಬೈಲ್ (ನಿಷೇಧಿತ ವಸ್ತು) ಎಸೆದ ಘಟನೆ ಸಂಬಂಧ ಮೂವರು ಕೈದಿಗಳು ಹಾಗೂ ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಕಾರಾಗೃಹದ ಕಾರ್ಯನಿರ್ವಾಹಕ ಜೈಲರ್ ಪ್ರಕಾಶ್ ಆರ್. ಶಿಂಧೆ ನೀಡಿದ ದೂರಿನ ಮೇರೆಗೆ ಕೈದಿ ಹಳ್ಳೇಶ , ಸಲ್ಮಾನ್, ರವಿ ಮತ್ತು ಒಬ್ಬ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಏ.20ರಂದು ಮಧ್ಯಾಹ್ನ ಕಾರಾಗೃಹದ ಗೋಡೆಯ ಮೇಲಿಂದ ಪ್ಲಾಸ್ಟಿಕ್ ಪ್ಯಾಕೆಟ್ ಎಸೆದಿದ್ದು, ಅದನ್ನು ಕೈದಿಗಳು ತೆಗೆದುಕೊಂಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಕೈದಿಯೊಬ್ಬರಿಂದ ನಿಷೇಧಿತ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಕಿ: ಸಿಲೆಂಡರ್ ಸ್ಪೋಟ, ಮಗುವಿಗೆ ಗಾಯ

ತೆಕ್ಕಲಕೋಟೆ: ಪಟ್ಟಣದ ಬಳ್ಳಾರಿ ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯರಾತ್ರಿ 11.30ರ ಸುಮಾರಿಗೆ ತಿರುಮಲ ಹೋಟೆಲ್ಗೆ ಬೆಂಕಿ ತಲುಗಿದ ಘಟನೆ ಜರುಗಿದೆ.

ಈ ಸಂದರ್ಭದಲ್ಲಿ ಹೋಟಲ್ಗೆ ಸಂಪೂರ್ಣ ಬೆಂಕಿ ಆವರಿಸಿದೆ. ಭೀಕರ ಬೆಂಕಿಗೆ ಎರಡು ಸಿಲಿಂಡರ್ಗಳು ಸ್ಪೋಟಗೊಂಡಿದ್ದು, ಶಬ್ದಕ್ಕೆ ನಿದ್ದೆಯಲ್ಲಿದ್ದ ಕುಟುಂಬಸ್ಥರು ಗಾಬರಿಯಿಂದ ಎದ್ದು ಹೊರಗೆ ಓಡಿದ್ದಾರೆ.

ಹೋಟೆಲ್ ಮಾಲೀಕ ಈರಣ್ಣ ಸೇರಿದಂತೆ ಕುಟುಂಬದ 9 ಜನ ಸದಸ್ಯರು ಹೋಟೆಲ್ನಲ್ಲಿ ಮಲಗಿದ್ದರು. ಇವರಲ್ಲಿ ಬಾಲಕ ಶ್ರೀನಿವಾಸಗೆ(10) ಸುಟ್ಟಗಾಯಗಳಾಗಿದ್ದು, ಉಳಿದವರು ಪಾರಾಗಿದ್ದಾರೆ.

ಸ್ಟೋಟದ ಪರಿಣಾಮ ಹೋಟೆಲ್ ಪಕ್ಕದ ಟೈರ್ ಅಂಗಡಿ ಹಾಗೂ ಪಂಚರ್ ಅಂಗಡಿ ಸಂಪೂರ್ಣವಾಗಿ ಸುಟ್ಟು, ಅಪಾರ ನಷ್ಟ ಸಂಭವಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದಿರು. ಘಟನೆಯ ಸ್ಥಳದಲ್ಲಿದ್ದ ಬಳ್ಳಾರಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ತಕ್ಷಣವೆ ಗಾಯಾಳು ಶ್ರೀನಿವಾಸನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ಗೆ ದಾಖಲಿಸಿದ್ದಾರೆ. ಸಿರುಗುಪ್ಪ ತಹಶೀಲ್ದಾರ್ ಗೌಸಿಯಾ ಬೇಗಂ ಗುರುವಾರ ಘಟನಾ ಸ್ಥಳದ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-25-59573274

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.