ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ವಿಎಸ್ಕೆ) ನಕಲಿ ಘಟಿಕೋತ್ಸವ ಪ್ರಮಾಣಪತ್ರ ಹಗರಣ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಕುಲಪತಿ ಪ್ರೊ. ಎಂ. ಮುನಿರಾಜು ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟಿಕೋತ್ಸವ ಪ್ರಮಾಣ ಪತ್ರ ಹಗರಣದಲ್ಲಿ ವಿ.ವಿಯ ಹಿಂದಿನ ಕುಲಸಚಿವ ರಮೇಶ್ ಒಲೇಕಾರ್, ಮಾಜಿ ಪ್ರಭಾರ ಕುಲಪತಿ ಸಾಹೇಬ್ ಅಲಿ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳಾದ ಮಹಾಂತೇಶ್ ಮತ್ತು ಹನುಮೇಶ್ ಸೂಡಿ ಮತ್ತಿತರರು ಅವರು ಶಾಮೀಲಾಗಿರುವುದು ಪತ್ತೆಯಾಗಿದೆ. ಅಕ್ರಮದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ ವಿವಿಯ ಪರೀಕ್ಷಾಂಗ ಕುಲಸಚಿವ ಎನ್.ಎಂ. ಸಾಲಿ, ‘ಘಟಿಕೋತ್ಸವ ಪ್ರಮಾಣ ಪತ್ರ ಹಗರಣದ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಲಾಗಿತ್ತು. ಅಲ್ಲಿ ವಿ.ವಿ ದೂರನ್ನು ಪರಿಶೀಲಿಸಿದ ಪೊಲೀಸರು ತಮಗೆ ಬೇಕಾದ ನಮೂನೆಯಲ್ಲಿ ದೂರು ನೀಡಬೇಕು ಎಂದು ತಿಳಿಸಿದರು. ಹೀಗಾಗಿ ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಝಂಡೇಕರ್ ಅಕ್ರಮದ ತನಿಖೆ: ವಿ.ವಿಗೆ ನೇಮಕಾತಿ ಹೊಂದುವಲ್ಲಿ ಮತ್ತು ಇತರರ ವಿಷಯಗಳಲ್ಲಿ ಅಕ್ರಮವೆಸಗಿರುವ ಪ್ರೊ. ಅನಂತ್ ಝಂಡೇಕರ್ ಅವರ ಪದೋನ್ನತಿಯನ್ನು ತಡೆಹಿಡಿಯಲಾಗಿದೆ. ಈಗಾಗಲೇ ನ್ಯಾಯಾದೀಶರೊಬ್ಬರ ಮೂಲಕ ಪ್ರಾಥಮಿಕ ತನಿಖೆ ಮಾಡಲಾಗಿದ್ದು, ಅದರಲ್ಲಿ ಅವರ ತಪ್ಪುಗಳು ಸಾಬೀತಾಗಿವೆ. ಈಗ ನಿವೃತ್ತ ನ್ಯಾಯಾಧೀಶ ವಸಂತ ಕುಮಾರ್ ನೇತೃತ್ವದಲ್ಲಿ ಮತ್ತೊಂದು ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗಲೇ ಅವರು ರಾಜ್ಯಪಾಲ, ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಅಲ್ಲಿಂದ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವುದಿಲ್ಲ’ ಎಂದು ಅವರು ಪುನರುಚ್ಚರಿಸಿದರು.

ಆತ್ಮಹತ್ಯೆ ಪ್ರಕರಣವೊಂದರಲ್ಲಿ ಆರೋಪ ಎದುರಿಸುತ್ತಿರುವ ಪ್ರೊ. ಮೋಹನ್ ದಾಸ್ ಅವರು ತಮಗೆ ಕ್ಲೀನ್ ಚೀಟ್ ಸಿಕ್ಕಿರುವ ಕುರಿತ ‘ಬಿ ರಿಪೋರ್ಟ್’ ಸಲ್ಲಿಸದ ಕಾರಣ ಅವರ ವೇತನವನ್ನೂ ತಡೆಹಿಡಿಯಲಾಗಿದೆ’ ಎಂದು ವಿವರಿಸಿದರು.

ಕುಲಸಚಿವ ಎನ್.ಎಂ. ಸಾಲಿ ಹಾಗೂ ಲೋಕೇಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-25-1198824021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.