ಕಂಪ್ಲಿ: ತಾಲ್ಲೂಕಿನ ಹಂಪಾದೇವನಹಳ್ಳಿ ಗ್ರಾಮದ ಬಳಿ ಹರಿಯುವ ನಾರಿಹಳ್ಳ ದಂಡೆಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ಕಾಲದ ಅಪ್ರಕಟಿತ ಶಾಸನ ಪತ್ತೆಯಾಗಿದೆ.

ಸುಮಾರು 16ನೇ ಶತಮಾನಕ್ಕೆ ಸೇರಿರಬಹುದು ಎನ್ನಲಾಗಿದ್ದು, ಶಾಸನದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಲಿಪಿ ಕಂಡುಬಂದಿರುವುದು ವಿಶೇಷ.

ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಶಾಸನ ತಜ್ಞ ನಾಗರಾಜಪ್ಪ, ಸಂಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಅವರು ಈ ಶಾಸನ ಕುರಿತು ಮಾಹಿತಿ ಒದಗಿಸಿದ್ದಾರೆ.

ಶಾಸನದಲ್ಲಿ ‘ಶ್ರೀಕೃಷ್ಣರಾಯ ಪುರವೆಂದು ಪ್ರತಿ ನಾಮವಾದ ಹಂಪಾದೇವಿ ಹಳಿಯ ಹೊಲಮೆರೆ" ಎಂದು ಉಲ್ಲೇಖವಿದೆ. ಶ್ರೀಕೃಷ್ಣದೇವ ರಾಯನ ಹಂಪಾದೇವನಹಳ್ಳಿ ಶಾಸನದ ಪ್ರಕಾರ ಶಾಲಿವಾಹನ ಶಕವರ್ಷ 1433ನೆಯ ಪ್ರಜಾಪತಿ, ಚೈತ್ರ ಶು.13 ಬುಧವಾರ (ಕ್ರಿ.ಶ.12-3-1511)ದಂದು ಕೃಷ್ಣರಾಯನು ವಿವಿಧ ಗೋತ್ರದ ಮಹಾಜನಗಳಿಗೆ ನಾರಿಸೀಮೆಯ ಹಂಪಾದೇವಹಳ್ಳಿಯನ್ನು ಕೃಷ್ಣರಾಯಪುರ ಎಂದು ಮರು ನಾಮಕರಣ ಮಾಡಿ ದಾನ ನೀಡಿರುವ ಉಲ್ಲೇಖವಿದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ಶಾಸನ ಪತ್ತೆ ಮಾಡಿರುವ ಕೊಪ್ಪಳ ತಾಲ್ಲೂಕು ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ಉಪನ್ಯಾಸಕ ಕೆ.ಅಂಜಿನಯ್ಯ ಜೀರಿಗನೂರು ಮಾತನಾಡಿ, ಈ ಶಾಸನ ಸುಮಾರು 5 ಅಡಿ ಎತ್ತರ, 2 ಅಡಿ ಅಗಲವಿದೆ. ಬೃಹತ್ ಗಾತ್ರದ ಬಿಳಿ ಗ್ರಾನೈಟ್ ಕಲ್ಲು ಬಂಡೆಯ ಮೇಲೆ ಮೂರು ಫಲಕಗಳನ್ನು ಒಳಗೊಂಡಿದೆ. ಮೊದಲ ಶಾಸನದ ಮೇಲ್ಭಾಗದ ಎಡ ಮತ್ತು ಬಲಭಾಗದಲ್ಲಿ ಕ್ರಮವಾಗಿ ಸೂರ್ಯ, ಚಂದ್ರ ಚಿಹ್ನೆಗಳನ್ನು ಕೆತ್ತಲಾಗಿದೆ. ಎರಡನೇ ಭಾಗದಲ್ಲಿ ಮೂರು ಸಾಲುಗಳ ಶಾಸನ ಹಾಗೂ ಮೂರನೇ ಭಾಗದಲ್ಲಿ ವಿಷ್ಣುವಿನ 3ನೇ ಅವತಾರ ವಾಮನ ಚಿತ್ರವನ್ನು ಕೆತ್ತಲಾಗಿದೆ ಎಂದು ವಿವರಿಸಿದ್ದಾರೆ.

ಹಂಪಾದೇವನಹಳ್ಳಿ ಗ್ರಾಮದ ಯುವಕರಾದ ಕರಿಬಸವ, ಉಮೇಶ್, ಪ್ರವೀಣ್ ಅವರು ಶಾಸನ ಪತ್ತೆ ಮಾಡುವಲ್ಲಿ ಸಹಕರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-25-126550156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.