ತೆಕ್ಕಲಕೋಟೆ: ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುಸ್ಲಿಂ ಸಮುದಾಯ ಜವಾಬ್ದಾರಿಯುತವಾಗಿ ಸಹಕರಿಸಬೇಕು ಎಂದು ಬಳ್ಳಾರಿ ಜಿಲ್ಲಾ ವಕ್ಫ್ ಅಧಿಕಾರಿ ನೂರ್ ಪಾಷ ಹೇಳಿದರು.

ಪಟ್ಟಣದ 3ನೇ ವಾರ್ಡಿನ ಜಾಮಿಯಾ ಮಸೀದಿಯ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾಮಗಾರಿ ಗುರುವಾರ ಪರಿಶೀಲನೆ ನಡೆಸಿ ಮಾತನಾಡಿದರು.

ಜಾಮಿಯಾ ಮಸೀದಿಯ ಶೌಚಾಲಯ ನಿರ್ಮಾಣ ಹಾಗೂ ಇತರ ಕಾಮಗಾರಿಗೆ ರಾಜ್ಯ ವಕ್ಫ್ ಮಂಡಳಿಯಿಂದ ₹10 ಲಕ್ಷ ಹಾಗೂ ಶಾನವಾಸಪುರ ಗ್ರಾಮದ ಜಾಮಿಯಾ ಮಸೀದಿ ನಿರ್ಮಾಣ ಕಾರ್ಯಕ್ಕೆ ₹20 ಲಕ್ಷ ಮಂಜೂರಾತಿ ಆಗಿದ್ದು, ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪಟ್ಟಣದ ಶಾದಿ ಮಹಲ್ ಕಾಮಗಾರಿ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗ, ಮುಸ್ಲಿಂ ಖಬರಸ್ಥಾನ್ ಹಾಗೂ ಅಬೂ ಸಾ ಮೆಕ್ಕಾ ಮಸೀದಿಯ ಸ್ಥಳ ಪರಿಶೀಲನೆ ನಡೆಸಿದರು.ಜಾಮಿಯಾ ಮಸೀದಿಯ ಮುತವಲಿ ವೈ ಖಾದರ್ ವಲಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಜಿಲಾನಿ, ನಿರ್ದೇಶಕರಾದ ಅಯೂಬ್, ಬಿ ಕಾಸಿಂ, ಬೆಳಗಲ್ ಹಸೇನ್, ನಿಸಾರ್ ಅಹಮದ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-25-1821209407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.