ತೆಕ್ಕಲಕೋಟೆ: ಸಮೀಪದ ಸಿರಿಗೇರಿ ಗ್ರಾಮ ಸೇರಿದಂತೆ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ, ಕೆರೆಯ ಅಭಿವೃದ್ಧಿ ಕಾಮಗಾರಿಯು ಸಂಪೂರ್ಣ ಸ್ಥಗಿತಗೊಂಡಿದ್ದು, ಕೆರೆ ನೀರು ಅವಲಂಬಿಸಿದ್ದ ಗ್ರಾಮಸ್ಥರಿಗೆ ಕುಡಿಯಲು ಕಾಲುವೆ ನೀರೇ ಗತಿ ಎಂಬಂತಾಗಿದೆ.

ದಾಸಾಪುರ ಗ್ರಾಮದ ಬಳಿ ನಿರ್ಮಿಸಲಾದ ಕೆರೆಯು ಸಿರಿಗೇರಿ, ಕೊಂಚಿಗೇರಿ, ದಾಸಾಪುರ, ಸಿದ್ಧರಾಂ ಪುರ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೆರೆ ನಿರ್ಮಿಸಲಾಗಿತ್ತು. ಆದರೆ ಕೆಲ ವರ್ಷಗಳಿಂದ ಕೆರೆ ಸಿಥಿಲಗೊಂಡು ಶೇಖರಣೆ ಮಾಡಿದ್ದ ನೀರು ಸೋರಿಕೆ ಆಗುತ್ತಿದ್ದ ಕಾರಣ, ಕೆರೆಯನ್ನು ಪುನಃ ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಗಿತ್ತು.

ಅದರಂತೆ 2024 ರಲ್ಲಿ ಸಿರಿಗೇರಿ ಮತ್ತು ಇತರೆ 3 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜ ನೆಯ ಪುನಃಶ್ವೇತನ ಕಾಮಗಾರಿಯ ಅಂದಾಜು ಮೊತ್ತ ₹ 9.96 ಕೋಟಿ ಜಲ ಜೀವನ ಮಿಷನ್ (ಜೆಜೆಎಂ) ಅಡಿಯಲ್ಲಿ ಆಡಳಿತಾತ್ಮಕ ಅನುಮೋದನೆಗೆ ಒಪ್ಪಿಗೆ ನೀಡಲಾಗಿತ್ತು.

ಅದರನ್ವಯ ಕೆರೆಯ ನೀರನ್ನು ಸಂಪೂರ್ಣ ಬರಿದು ಮಾಡಿ, ಕೆರೆಯ ನೆಲಕ್ಕೆ ಹಾಸಿದ್ದ ಬಂಡೆಗಳನ್ನು ಕಿತ್ತುಹಾಕಿ ಗುಡ್ಡೆ ಹಾಕಲಾಯಿತು. ನಂತರ ಕಾಮಗಾರಿ ಆರಂಭವಾಗದೆ ಕಿತ್ತಲಾದ ನೆಲಹಾಸು (ಕರೆ) ಬಂಡೆಗಳ ರಾಶಿ ಕೆರೆ ಅಂಗಳದಲ್ಲಿ ಕಂಡುಬರುತ್ತಿದ್ದು, ಪುರಾತನ ಪಳೆಯುಳಿಕೆಗಳ ಅವಶೇಷಗಳಂತೆ ಕಂಡು ಬರುತ್ತಿದೆ.

'ಕೆರೆ ಕಾಮಗಾರಿ ಚಾಲ್ತಿಯಲ್ಲಿದ್ದು, ಕಾಲುವೆಯಿಂದ ಕೆರೆವರೆಗಿನ ಪೈಪ್ ಲೈನ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಜೂನ್ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದು ಜಿ.ಪಂ. ಜೆಇ ಕಾಂತರಾಜ್ ತಿಳಿಸಿದರು.

ಏಪ್ರಿಲ್ ಅಂತ್ಯಕ್ಕೆ ಕಾಲುವೆಗೆ ನೀರು ಸರಬರಾಜು ಇರುವುದಿಲ್ಲ ಆದ್ದರಿಂದ ಮೇ, ಜೂನ್ ಮತ್ತು ಜುಲೈ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ ಎಂಬ ಆತಂಕ ಗ್ರಾಮಸ್ಥರದು.

ಕುಡಿಯುವ ನೀರು ಸರಬರಾಜು ಇಲ್ಲದೆ ಇರುವಾಗ ಬೋರ್ವೆಲ್ ನೀರು ಬಿಡಲಾಗುವುದು ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-25-15653044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.