ತೆಕ್ಕಲಕೋಟೆ: ಪಟ್ಟಣದ ಉಪ್ಪಾರ ಹೊಸಹಳ್ಳಿ ರಸ್ತೆಯ ಬಾಲಾಜಿ ರೈಸ್ ಮಿಲ್ ಬಳಿ ಶನಿವಾರ ವಿವಾಹಿತ ಮಹಿಳೆಯೊಬ್ಬರ ಕೊಲೆ ಯತ್ನ ನಡೆದಿದೆ.

1ನೇ ವಾರ್ಡಿನ ನಿವಾಸಿ ಕೆ.ಎಸ್. ಮಹಂಕಾಳಿ (28) ಅವರು ಕಿರಾಣಿ ಅಂಗಡಿಗೆ ತೆರಳುವಾಗ ಆರೋಪಿ ಟಿ. ಅಂಜಿನಿ (37) ಎಂಬಾತ ಅವರ ಕೈ ಹಾಗೂ ಸೊಂಟದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡು ನರಳುತ್ತಿದ್ದ ಮಹಿಳೆಯನ್ನು ತಕ್ಷಣವೇ ಬಳ್ಳಾರಿಯ ಟ್ರಾಮಾ ಕೇರ್ ವಿಭಾಗಕ್ಕೆ ಸೇರಿಸಲಾಯಿತು. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಸದ್ದಾಂ ಹುಸೇನ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-25-88845988

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.