ಬಳ್ಳಾರಿ: ಬಳ್ಳಾರಿ ನಗರದ ಕೌಲ್ ಬಜಾರ್ನ ಯಾಸಿನ್ ಸಾಬ್ ಮಸ್ಜಿದ್ (ಸುನ್ನಿ) ವಕ್ಫ್ ಸಂಸ್ಥೆಯ ಹೊಸ ಸಮಿತಿ ರಚನೆಗೆ ಮೇ 5 ರಿಂದ 12ರ ವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಮೇ 5 ರಂದು ನಾಮಪತ್ರ ಪಡೆದು, ಮೇ 12ರ ಮಧ್ಯಾಹ್ನ 01.30ರೊಳಗೆ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬಹುದು.

ಮೇ 13 ರಂದು ನಾಮಪತ್ರ ಪರಿಶೀಲನೆ ಹಾಗೂ ಮೇ 14 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಮೇ 23 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮೊಹಮ್ಮದಿಯಾ ಶಾಲೆಯಲ್ಲಿ ಮತದಾನ ನಡೆಯಲಿದ್ದು, ಅಂದೇ ಸಂಜೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕಲಬುರಗಿ ವಿಭಾಗೀಯ ವಕ್ಪ್ ಅಧಿಕಾರಿ ಹಾಗೂ ಕೌಲ್ ಬಜಾರ್ ಯಾಸೀನ್ ಸಾಬ್ ಮಸ್ಜಿದ್(ಸುನ್ನಿ) ಚುನಾವಣಾಧಿಕಾರಿ ನೂರ್ ಪಾಷಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-25-1693321498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.