ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ದೇವಸ್ಥಾನದಲ್ಲಿ ದರ್ಶನ್ ಭಾವಚಿತ್ರಕ್ಕೆ ಪೂಜೆ: ಅರ್ಚಕ ಅಮಾನತು

Published 6 ಆಗಸ್ಟ್ 2024, 13:03 IST
Last Updated 6 ಆಗಸ್ಟ್ 2024, 13:03 IST
ಅಕ್ಷರ ಗಾತ್ರ

ಕುರುಗೋಡು(ಬಳ್ಳಾರಿ ಜಿಲ್ಲೆ): ಇಲ್ಲಿನ ದೊಡ್ಡಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಟ ದರ್ಶನ್ ತೂಗುದೀಪ ಅವರ ಭಾವಚಿತ್ರಗಳನ್ನು ಇರಿಸಿ, ಪೂಜಿಸಿದ ಆರೋಪದ ಮೇಲೆ ಅರ್ಚಕ ಜೀರ್ ಮಲ್ಲಿಕಾರ್ಜುನ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ದೇವಸ್ಥಾನ ಮಂಡಳಿ ಆದೇಶ ಹೊರಡಿಸಿದೆ.

ಗರ್ಭಗುಡಿಯ ಮೂಲ ವಿಗ್ರಹದ ಮುಂಭಾಗದಲ್ಲಿ ನಟ ದರ್ಶನ್ ಅವರ ವಿವಿಧ ಭಂಗಿಯ ಆರು ಚಿತ್ರಗಳನ್ನು ಇರಿಸಿ ವಿಶೇಷ ಪೂಜೆ ನೆರವೇರಿಸಿದ ವಿಡಿಯೊ ಸೋಮವಾರ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಭಕ್ತರಿಂದ ಟೀಕೆ ವ್ಯಕ್ತವಾಗಿತ್ತು.

‘ದೇವಸ್ಥಾನದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT