ಕಾನಹೊಸಹಳ್ಳಿ: ಸಮೀಪದ ಅಮಲಾಪುರ ಗ್ರಾಮದಲ್ಲಿ ಕಾಳು ಕಟ್ಟುವ ಹಂತದಲ್ಲಿ ಇದ್ದ ಮೆಕ್ಕೆಜೋಳದ ಬೆಳೆಯನ್ನು ಕರಡಿಗಳು ದಾಳಿ ಮಾಡಿ ಸಂಪೂರ್ಣ ನಾಶ ಮಾಡಿವೆ.
ಅಮಲಾಪುರ ಗ್ರಾಮದ ಪರಮೇಶ್ವರಮ್ಮ ಎಂಬವರು ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಕಿದ್ದರು. ಬೆಳೆಯು ಕಾಳುಕಟ್ಟುವ ಹಂತದಲ್ಲಿ ಇತ್ತು. ಈ ಸಂದರ್ಭದಲ್ಲಿ ಕರಡಿಗಳ ಗುಂಪು ದಾಳಿ ಮಾಡಿದ್ದು, ರೈತ ಮಹಿಳೆ ಕಂಗಲಾಗಿದ್ದಾರೆ. ಅಲ್ಲದೆ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಹಲವು ರೈತರ ಜಮೀನುಗಳಿಗೆ ಕರಡಿ ಮತ್ತು ಕಾಡು ಹಂದಿಗಳು ದಾಳಿ ಮಾಡಿ ಬೆಳೆ ನಾಶಪಡಿಸಿವೆ. ಕೈಗೆ ಬಂದ ಬೆಳೆ ನಾಶವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾಡು ಪ್ರಾಣಿಗಳು ರಾತ್ರಿ ವೇಳೆ ಜಮೀನುಗಳಿಗೆ ದಾಳಿಯಿಟ್ಟು ಬೆಳೆ ನಾಶಪಡಿಸುವುದನ್ನು ತಪ್ಪಿಸಲು ರೈತರು ಜಮೀನಿಗೆ ತೆರಳಿ ನಿತ್ಯ ರಾತ್ರಿ ಕಾವಲು ಕಾಯುವುದು ಕಾಯಕವಾಗಿದೆ, ಇಲ್ಲವಾದರೆ ಬೆಳೆ ಕೈಗೆ ಸಿಗುವುದಿಲ್ಲ ಎಂಬ ಆತಂಕ ರೈತರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.