ಬಳ್ಳಾರಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅಶಾಂತಿ, ಯುದ್ಧದ ಪರಿಣಾಮವಾಗಿ ವಾಣಿಜ್ಯ ಉದ್ದೇಶದ ಸಿಲಿಂಡರ್ಗಳ ಪೂರೈಕೆ ಕಳೆದ ನಾಲ್ಕೈದು ದಿನಗಳಿಂದ ಸ್ಥಗಿತಗೊಂಡಿದ್ದು, ಹೊಟೇಲ್ ಉದ್ಯಮ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದೆ. ಇದರ ಮಧ್ಯೆಯೇ ಗೃಹ ಬಳಕೆಯ ಅನಿಲದ ದಾಸ್ತಾನೂ ಕರಗುತ್ತಿದ್ದು, ಸಾಮಾನ್ಯ ಜನರಿಗೂ ಸಮಸ್ಯೆಯಾಗುವ ಸನ್ನಿವೇಶ ಸನ್ನಿಹಿತ ಎನ್ನಲಾಗಿದೆ.

ಅಮೆರಿಕ ಹಾಗೂ ಇಸ್ರೇಲ್ ಒಟ್ಟುಗೂಡಿ ಇರಾನ್ ಮೇಲೆ ದಾಳಿ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯದಿಂದ ವಿವಿಧ ದೇಶಗಳಿಗೆ ಪೂರೈಕೆಯಾಗುವ ತೈಲ ಸ್ಥಗಿತಗೊಂಡಿದೆ. ಎಲ್ಲಿಯೋ, ಯಾರೋ ನಡೆಸುತ್ತಿರುವ ಯುದ್ಧದ ಪರಿಣಾಮ ನೇರವಾಗಿ ಜನ ಜೀವನದ ಮೇಲೆ ಪರಿಣಾಮ ಬೀರಲಾರಂಭಿಸಿದೆ.

ಸದ್ಯಕ್ಕೆ ಪ್ರಥಮ ಆದ್ಯತೆಯಾಗಿ ಗೃಹ ಬಳಕೆಯ ಸಿಲಿಂಡರ್ಗಳು ಎಂದಿನಂತೇ ಪೂರೈಕೆಯಾಗುತ್ತಿದೆ. ಆದರೆ, ಬುಕ್ಕಿಂಗ್ ಅವಧಿಯನ್ನು ಕಡಿತ ಮಾಡಲಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಕಳೆದ ಹಲವು ದಿನಗಳಿಂದ ವ್ಯತ್ಯಯವಾಗಿತ್ತು. ಆದರೆ, ಈಗ ಸಂಪೂರ್ಣ ಸ್ಥಗಿತಗೊಂಡಿವೆ.

ಹೀಗಾಗಿ ವಾಣಿಜ್ಯ ಸಿಲಿಂಡರ್ ಬಳಸುತ್ತಿದ್ದ ಉದ್ಯಮಗಳು ಸ್ಥಗಿತದ ಭೀತಿ ಎದುರಿಸುತ್ತಿವೆ. ಮುಖ್ಯವಾಗಿ ಹೊಟೇಲ್ಗಳು ತತ್ತರಿಸಿ ಹೋಗಿವೆ. ಸಿಲಿಂಡರ್ಗಳು ಲಭ್ಯವಾಗದ ಕಾರಣ ಹಲವು ದಿನಗಳಿಂದ ರಾತ್ರಿ ಪಾಳಿಯನ್ನೇ ನಿಲ್ಲಿಸಿದ್ದ ಹೊಟೇಲ್ಗಳು ಬಹುತೇಕ ಇಂದಿನಿಂದ ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದಿವೆ.

ಇತ್ತೀಚೆಗೆ ಹೊಟೇಲ್ಗಳು ಅತ್ಯಾಧುನಿಕ ಅಡುಗೆ ಮನೆ ವ್ಯವಸ್ಥೆ ಅಳವಡಿಸಿಕೊಂಡಿವೆ. ಹೀಗಾಗಿ ಇಲ್ಲಿ ಉರುವಲಾಗಿ ಕಟ್ಟಿಗೆ ಅಥವಾ ಇನ್ಯಾವುದೇ ದಹ್ಯ ವಸ್ತುಗಳನ್ನು ಬಳಸಲು ಅವಕಾಶವೇ ಇಲ್ಲ. ಅಡುಗೆ ಅನಿಲವೇ ಆಗಬೇಕು. ಇಂಥ ಅಡುಗೆ ಮನೆ ಹೊಂದಿರುವ ಹೊಟೇಲ್ ಮಾಲೀಕರು ಬಾಗಿಲು ಮುಚ್ಚಲೇ ಬೇಕಿದೆ. ಇನ್ನು ಕೆಲವು ಹೊಟೇಲ್ಗಳು ಸೌದೆ ಒಲೆ ಹೊಂದಿವೆ. ಆದರೂ, ಸೀಮಿತ ಪದಾರ್ಥಗಳನ್ನಷ್ಟೇ ತಯಾರಿಸಬೇಕಾಗುತ್ತದೆ. ದೋಸೆಯಂಥ ಪದಾರ್ಥಗಳು ಲಭ್ಯವಾಗುವುದು ಅನುಮಾನ. ಇನ್ನೊಂದೆಡೆ, ಹೊಟೇಲ್ಗಳಲ್ಲಿನ ಪದಾರ್ಥಗಳೂ ದುಭಾರಿಯಾಗುವ ಆತಂಕವಿದೆ.

ಇನ್ನೂ ಮುಖ್ಯವಾಗಿ, ಪರಿಸ್ಥಿತಿ ಹೀಗೇ ಮುಂದುವರಿದರೆ, ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳ ಜತೆಗೆ, ಕಾರ್ಮಿಕರೂ ಬದಕೂ ಅತಂತ್ರವಾಗುವ ಪರಿಸ್ಥಿತಿ ಎದುರಾಗಿದೆ.

Quote - ಸಿಲಿಂಡರ್ಗಳು ಸಿಗದೇ ಈಗಾಗಲೇ ಒಂದು ಪಾಳಿಯನ್ನು ನಿಲ್ಲಿಸಿದ್ದೆವು. ಈಗ ಹೊಟೇಲ್ ಅನ್ನೇ ಬಂದ್ ಮಾಡುವ ಪರಿಸ್ಥಿತಿ ಬಂದೊದಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಉದ್ಯಮ ನಂಬಿರುವ ಎಲ್ಲರಿಗೂ ಕಷ್ಟವಾಗಲಿದೆ. – ನವೀನ್ ಹೊಟೇಲ್ ಉದ್ಯಮಿ ಬಳ್ಳಾರಿ

Quote - ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ವಾಣಿಜ್ಯ ಉದ್ದೇಶದ ಸಿಲಿಂಡರ್ ಪೂರೈಕೆ ಕೆಲ ದಿನಗಳಿಂದ ವ್ಯತ್ಯವಾಗಿತ್ತು. ಈಗ ನಿಲುಗಡೆಯಾಗಿದೆ. ದಾಸ್ತಾನು ವಿತರಣೆ ಬಗ್ಗೆ ನಮಗೂ ಮಾಹಿತಿ ಇಲ್ಲ. ನರಸಿಂಹ ಗ್ಯಾಸ್ ಏಜೆನ್ಸಿಯೊಂದರ ಮಾಲೀಕ ಬಳ್ಳಾರಿ

Cut-off box - ಕಂಪನಿಗಳಿಂದ ಸಂದೇಶ ಸಿಲಿಂಡರ್ ವ್ಯತ್ಯಯದ ಕುರಿತು ತಮ್ಮ ಗ್ರಾಹಕರಿಗೆ ಸಂದೇಶ ರವಾನಿಸುತ್ತಿರುವ ಸಿಲಿಂಡರ್ ಪೂರೈಕೆದಾರ ಕಂಪನಿಗಳು ಅನುಮಾನ ಬಗೆಹರಿಸುವ ಪ್ರಯತ್ನ ಮಾಡುತ್ತಿವೆ. ‘ಇಂಧನ ಕೊರತೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂಗತಿಗಳು ಆಧಾರರಹಿತ. ದೇಶದಲ್ಲಿ ಸಾಕಷ್ಟು ಇಂಧನ ಲಭ್ಯವಿದೆ. ನಾಗರಿಕರು ಆತಂಕಪಡಬೇಕಿಲ್ಲ. ಇಂಧನವನ್ನು ವಿವೇಚನಾಪೂರ್ವಕವಾಗಿ ಬಳಸುವುದು ಎಂದೆಂದಿಗೂ ಒಳ್ಳೆಯದು’ ಎಂದು ಹೇಳುತ್ತಿವೆ.

Cut-off box - ಗೃಹ ಬಳಕೆ ಸಿಲಿಂಡರ್ಗೂ ಅಭಾವ? ಸದ್ಯದ ಮಾಹಿತಿ ಪ್ರಕಾರ ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಆದರೆ ಅದರ ದಾಸ್ತಾನು 15–18 ದಿನಗಳಿಗೆ ಆಗುವಷ್ಟು ಮಾತ್ರ ಇದೆ ಎನ್ನಲಾಗಿದೆ. ಇದು ಮುಗಿದ ಮೇಲೆ ಮುಂದೇನು ಎಂಬ ಪ್ರಶ್ನೆಗೆ ಗ್ಯಾಸ್ ಏಜೆನ್ಸಿಗಳ ಬಳಿಯೂ ಉತ್ತರವಿಲ್ಲ. ಹೊಸ ದಾಸ್ತಾನು ಬಾರದೇ ಹೋದರೆ ನೇರವಾಗಿ ಜನರಿಗೆ ಸಮಸ್ಯೆಯಾಗಲಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.