ಬಳ್ಳಾರಿ: ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭದಲ್ಲಿ ಕರ್ನಾಟಕದಲ್ಲಿಯೇ ಸೇರಬೇಕು ಎಂದು ಮಿಡಿದ, ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಅಂಥವರಿಗೆ ಜನ್ಮ ಕೊಟ್ಟ ಬಳ್ಳಾರಿ ಜಿಲ್ಲೆಯಲ್ಲಿ ಶನಿವಾರ ನಡೆದ ‘ಕನ್ನಡ ರಾಜ್ಯೋತ್ಸವ’ ಜನ ಮತ್ತು ಜನಪ್ರತಿನಿಧಿಗಳ ಅಭಿಮಾನ ಶೂನ್ಯತೆಯಿಂದ ಸಾಕ್ಷಿಯಾಯಿತು.

ಜಿಲ್ಲಾಡಳಿತದಿಂದ ಬಳ್ಳಾರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 70ನೇ ರಾಜ್ಯೋತ್ಸವದ ನಡೆಯಿತು. ಉತ್ಸವಕ್ಕೆ ಜಿಲ್ಲೆಯ ಐದು ಕ್ಷೇತ್ರಗಳ ಶಾಸಕರಲ್ಲಿ ಯಾರೊಬ್ಬರೂ ಹಾಜರಾಗಿರಲಿಲ್ಲ. ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರೂ ಬಂದಿರಲಿಲ್ಲ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳ ಹೆಸರೆಲ್ಲವೂ ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣವಾಗಿತ್ತು.

ಕಾರ್ಯಕ್ರಮವನ್ನು ಜನರೂ ಉಪೇಕ್ಷಿಸಿದರು. ಜಿಲ್ಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಖಾಸಗಿ ಕಾರ್ಯಕ್ರಮಗಳಿಗೆ ದಂಡು ದಂಡಾಗಿ ಸೇರುವ, ಕಂಬ ಕಂಬಗಳಿಗೂ ಬ್ಯಾನರ್ ಕಟ್ಟಿದ್ದ ಜನ ರಾಜ್ಯದ ಉತ್ಸವಕ್ಕೆ ತಲೆಹಾಕಿಯೂ ನೋಡಲಿಲ್ಲ. ಹೀಗಾಗಿ ಜಿಲ್ಲಾಡಳಿತ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳನ್ನೇ ಸಮಾರಂಭಕ್ಕೆ ಕರೆತರಬೇಕಾಯಿತು.

ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಪ್ರೇಕ್ಷಕರನ್ನಾಗಿ ಮಾಡುವ ಪರಿಪಾಟ ಮುಂದುವರಿಯಿತು.

ಇದು ಜನ ಮತ್ತು ಜನಪ್ರತಿನಿಧಿಗಳ ಧೋರಣೆಯಾದರೆ, ಜಿಲ್ಲೆಯ ಅಧಿಕಾರಿ ವರ್ಗವೂ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ಭಾವ ತಾಳಿತು. ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗಾಗಿಯೇ ಮುಖ್ಯ ವೇದಿಕೆ ಪಕ್ಕದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಲ್ಲಿನ ಅರ್ಧ ಆಸನಗಳು ಮಾತ್ರವೇ ತುಂಬಿದ್ದವು.

ಪ್ರತಿ ಇಲಾಖೆಯಿಂದ ಒಂದೊಂದು ಸ್ತಬ್ಧಚಿತ್ರ ಮಾಡಲು ಜಿಲ್ಲಾಡಳಿತ ಸೂಚಿಸಿತ್ತು. ಹೀಗಾಗಿ ಸ್ತಬ್ಧಚಿತ್ರದ ಪ್ರದರ್ಶನ ಮುಗಿದಿದ್ದೇ ತಡ ಅಧಿಕಾರಿ ವರ್ಗ ಕಾರ್ಯಕ್ರಮದಿಂದ ಕಾಲ್ಕಿತ್ತರು.

ಇದಕ್ಕೂ ಮೊದಲು ಸಚಿವ ರಹೀಂ ಖಾನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ತಾಯಿ ಭುವನೇಶ್ವರಿ ಮತ್ತು ಏಕೀಕರಣ ಹುತಾತ್ಮ ರಂಜಾನ್ಸಾಬ್ ಅವರ ಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದ ಬಳಿಕ ಸರ್ಕಾರಿ ಇಲಾಖೆಗಳ ಸ್ತಬ್ಧ ಚಿತ್ರಗಳನ್ನು ವೀಕ್ಷಿಸಿದರು.

ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ತರಲಾಗಿದ್ದ ಕನ್ನಡ ಜ್ಯೋತಿಯನ್ನು ಸಚಿವರ ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತ ಕನ್ನಡ ನಾಡು–ನುಡಿಗೆ ಶ್ರಮಿಸಿದ 11 ಸಾಧಕರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಬರ್ರಕಥಾ- ಜಂಬಕ್ಕ, ಬಯಲಾಟ– ಚೆನ್ನದಾಸರ ಮಾರೆಪ್ಪ, ಹಗಲುವೇಷ– ಕೆ.ಶಂಕ್ರಪ್ಪ, ಕನ್ನಡ ಸೇವೆ- ಹೀಮಂತ್ ರಾಜ್ ಸಂಗನಕಲ್ಲು, ಶಿಕ್ಷಣ- ಸಿ.ಎಂ.ಶಿಗ್ಗಾವಿ ಸಂಡೂರು ಮತ್ತು ಪುರುಷೋತ್ತಮ, ವೈದ್ಯಕೀಯ- ಡಾ.ಮಧುಸೂಧನ್ ಕಾರಿಗನೂರು, ಸಾಹಿತ್ಯ ಕ್ಷೇತ್ರ- ಬಂಗಿ ದೊಡ್ಡ ಮಂಜುನಾಥ, ಚಿತ್ರಕಲೆ- ಮಹ್ಮದ್ ರಫಿ, ಸಾಹಿತ್ಯ/ಸಂಘಟನೆ- ದಮ್ಮೂರು ಮಲ್ಲಿಕಾರ್ಜುನ, ಪತ್ರಿಕೋದ್ಯಮ- ಕೆ.ಎನ್.ಗಂಗಾಧರ ಗೌಡ ಅವರನ್ನು ಸನ್ಮಾನಿಸಲಾಯಿತು.

ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕಿ ವರ್ತಿಕಾ ಕಟಿಯಾರ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್ ಇದ್ದರು.

ಕನ್ನಡ ಮಾತನಾಡಲು ತಡವರಿಸಿದ ಸಚಿವ ರಾಜ್ಯೋತ್ಸವ ಸಮಾರಂಭದಲ್ಲಿ ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ತುಂಬಾ ಕಷ್ಟಪಟ್ಟು ಕನ್ನಡದಲ್ಲಿ ಭಾಷಣ ಮಾಡಿದರು. ಪ್ರತಿ ಶಬ್ಧಗಳನ್ನೂ ಅವರು ತಪ್ಪಾಗಿ ಹೇಳಿದರು. ‘ಕನ್ನಡ ಭಾಷೆ ಎರಡೂವರೆ ವರ್ಷದಿಂದ ಇದೆ’ ಎನ್ನುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು. ಉಚ್ಚಾರಣೆ ದೋಷದ ಮಧ್ಯೆಯೂ ಅವರು ಕರ್ನಾಟಕದ ಏಕೀಕರಣಕ್ಕೆ ಪ್ರಾಣತೆತ್ತ ಪೈಲ್ವಾನ್ ರಂಜಾನ್ ಸಾಬ್ ಅವರ ಧೈರ್ಯ ಶೌರ್ಯ ಸ್ಮರಿಸಿದರು. ಬಳ್ಳಾರಿ ಜನ ಕರ್ನಾಟಕದಲ್ಲೇ ಉಳಿಯಲು ನಿರ್ಧರಿಸಿದ ನಿಲುವನ್ನು ತಮ್ಮ ಭಾಷಣದಲ್ಲಿ ಪ್ರಶಂಸಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.