ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರಿನಲ್ಲಿ ಬಿಜೆಪಿ ಸಂಕಲ್ಪ‌ ಯಾತ್ರೆ: ಯಾವ ನಾಯಕರು ಏನು ಹೇಳಿದರು?

Last Updated 23 ಫೆಬ್ರವರಿ 2023, 10:49 IST
ಅಕ್ಷರ ಗಾತ್ರ

ಬಳ್ಳಾರಿ: ಸಂಡೂರು ಪಟ್ಟಣದಲ್ಲಿ ಗುರುವಾರ ನಡೆದ ಬಿಜೆಪಿ ಸಂಕಲ್ಪ‌ ಯಾತ್ರೆಯಲ್ಲಿ ಬಿಜೆಪಿ ನಾಯಕರು ಮಾತನಾಡಿದರು. ಕೆಲ ನಾಯಕರು ಮಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

ರಾಜ್ಯದಲ್ಲಿ 140 ಸ್ಥಾನ ಗೆಲುವು ಖಚಿತವಾಗಿದೆ. ಈ ಸಲ ನಾನು ಚುನಾವಣೆಗೆ ನಿಲ್ಲುವುದಿಲ್ಲ. ಆದರೆ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಇಷ್ಟು ವರ್ಷ ಕಳೆದರೂ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ದಿ ಕಾಣುತ್ತಿದೆ.
–ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

*

ಸಂಡೂರು ಅಭ್ಯರ್ಥಿ ಯಾರು ಆಗುತ್ತಾರೊ ಗೊತ್ತಿಲ್ಲ. ಆದರೆ, ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯ10 ಸ್ಥಾನಗಳನ್ನು ಗೆಲ್ಲಿಸಿಕೊಡಲು ಅಮಿತ್‌ ಶಾ ಮನಸ್ಸು ಮಾಡಿದ್ದಾರೆ. ಇಲ್ಲಿಗೆ ತಂತ್ರ ರೂಪಿಸಲು ಬಂದಿದ್ದಾರೆ.
–ಆನಂದ್ ಸಿಂಗ್, ಪ್ರವಾಸೋದ್ಯಮ ಸಚಿವ

*

ರೈತರಿಗೆ ಬಜೆಟ್‌ನಲ್ಲಿ ಅನುಕೂಲವಾಗಿದೆ.
–ದೇವೇಂದ್ರಪಪ್ಪ, ಲೋಕಸಭಾ ‌ಸದಸ್ಯ

*

ಪ್ರಧಾನಿ ಮೋದಿ ದೇಶಭಕ್ತ. ದೇಶಕ್ಕಾಗಿ ಕೆಲಸ ‌ಮಾಡುತ್ತಿದ್ದಾರೆ.
–ವೈ ಎಂ ಸತೀಶ್, ವಿಧಾನ ಪರಿಷತ್ ಸದಸ್ಯ.

*

ಸಂಡೂರು ರಾಜಕಾರಣ ಬದಲಾವಣೆ ‌ಆಗಬೇಕು. ಬಿಜೆಪಿ ಗೆಲ್ಲಿಸಬೇಕು.
–ಕಾರ್ತಿಕೇಯ ಘೋರ್ಪಡೆ, ಬಿಜೆಪಿ ಮುಖಂಡ

*

ಕರ್ನಾಟಕದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿಯ ಸಂಕಲ್ಪ ಯಾತ್ರೆ ವಿಜಯ ಸಂಕಲ್ಪ‌ ಯಾತ್ರೆ ಆಗಬೇಕು ಕರ್ನಾಟಕದಲ್ಲಿ ‌ಕಾಂಗ್ರೆಸ್ ಛಿದ್ರ ಆಗಬೇಕು. ಅದಕ್ಕಾಗಿ ಅಮಿತ್ ಶಾ ಬಂದಿದ್ದಾರೆ. ಅಶ್ವಮೇಧ ಕುದುರೆ ಬಿಟ್ಟಿದ್ದೇವೆ. ಕಾಂಗ್ರೆಸ್‌ಗೆ ಧಮ್ಮಿದ್ದರೆ‌ ಕಟ್ಟಿ ಹಾಕಲಿ.
– ಶ್ರೀರಾಮುಲು, ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT