ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ: ಪ್ರವಾಹದಿಂದ ತುಂಗಭದ್ರಾ ನದಿ ಸೇತುವೆ ಹಾನಿ

Published : 5 ಆಗಸ್ಟ್ 2024, 15:59 IST
Last Updated : 5 ಆಗಸ್ಟ್ 2024, 15:59 IST
ಫಾಲೋ ಮಾಡಿ
Comments

ಕಂಪ್ಲಿ: ಇಲ್ಲಿಯ ತುಂಗಭದ್ರಾ ನದಿ ಸಂಪರ್ಕ ಸೇತುವೆ ಮೇಲೆ ಪ್ರವಾಹದ ನೀರು ಇಳಿಮುಖವಾಗಿದ್ದು, ಗಂಗಾವತಿ ಲೋಕೋಪಯೋಗಿ ಇಲಾಖೆ ಎಇಇ ಜೆ. ವಿಶ್ವನಾಥ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಸುಮಾರು 10 ದಿನಗಳ ಪರ್ಯಂತ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿತ್ತು. ಅದರಿಂದ ಸೇತುವೆ ಎರಡು ಬದಿ ಅಳವಡಿಸಿದ್ದ ರಕ್ಷಣಾ ಕಂಬಿಗಳು ಅಲ್ಲಲ್ಲಿ ಹಾಳಾಗಿವೆ. ಸೇತುವೆ ಮೇಲಿನ ಸಿಮೆಂಟ್ ಮೇಲ್ಪದರು, ಜಾಯಿಂಟ್‍ಗಳಿಗೆ ಹಾನಿಯಾಗಿವೆ. ಸೇತುವೆ ದುರಸ್ತಿಗಾಗಿ ಅಂದಾಜು ಪಟ್ಟಿ ತಯಾರಿಸಿ ಇಲಾಖೆಗೆ ಸಲ್ಲಿಸಲಾಗುವುದು. ಹಣ ಮಂಜೂರಾತಿ ಬಳಿಕ ಸರಿಪಡಿಸಿ ಬಸ್, ವಾಹನ, ಜನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

ಕೆ.ಆರ್.ಡಿ.ಸಿ.ಎಲ್‍ನಿಂದ ಎರಡು ವರ್ಷಗಳ ಹಿಂದೆ ನೂತನ ಸೇತುವೆ ನಿರ್ಮಾಣಕ್ಕಾಗಿ ₹86ಕೋಟಿಗೆ ಡಿ.ಪಿ.ಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಹಣಕಾಸು ಇಲಾಖೆಯ ಅನುಮೋದನೆ ಕಳುಹಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಇಲಾಖೆ ಸಹಾಯಕ ಎಂಜಿನಿಯರ್ ಶ್ವೇತಾ ಹಾಜರಿದ್ದರು.

ಆಗ್ರಹ: ಸರ್ಕಾರ ಪ್ರಸ್ತುತ ಸೇತುವೆ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು. ಸೇತುವೆ ಮೇಲೆ ಅಧಿಕ ಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕು. ಸೇತುವೆ ಆರಂಭದ ಎರಡು ಕಡೆ ಹೈಟ್ ಹಾರೇಸ್ಟ್ ಅಳವಡಿಸಬೇಕು ಎಂದು ಪಟ್ಟಣದ ಪ್ರಗತಿಪರ ಸಂಘಟನೆಗಳ ಒಕ್ಕೂಟ(ಪಕ್ಷಾತೀತ) ಅಧ್ಯಕ್ಷ ಜಿ.ಜಿ. ಚಂದ್ರಣ್ಣ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT