ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮ ಸಂಘದಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

Published : 12 ಸೆಪ್ಟೆಂಬರ್ 2024, 16:20 IST
Last Updated : 12 ಸೆಪ್ಟೆಂಬರ್ 2024, 16:20 IST
ಫಾಲೋ ಮಾಡಿ
Comments

ಹೂವಿನಹಡಗಲಿ: ‘ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ವಿಶ್ವನಾಥ ಅವರು ಸಹಕಾರಿಯ ಹಣ ದುರ್ಬಳಕೆ ಮಾಡಿಕೊಂಡಿದ್ದು, ಕೂಡಲೇ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ’ ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಆಗ್ರಹಿಸಿದರು.

ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಹಕಾರಿಯಿಂದ ₹1 ಕೋಟಿ ಆವರ್ತ ನಿಧಿ ಸಂಗ್ರಹಿಸಿ, ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ತೆರೆಯುವ ಚಿಂತನೆ ಮಾಡಲಾಗಿತ್ತು. ಈ ಹಿಂದೆ ಸೊಸೈಟಿಗೆ ನೇಮಕಗೊಂಡ ಏಳು ಸಿಬ್ಬಂದಿಯಿಂದ ಸಹಕಾರಿಯ ಬೆಳವಣಿಗೆಗಾಗಿ ₹19 ಲಕ್ಷ ದೇಣಿಗೆ ಪಡೆದು, ಹಣವನ್ನು ಆವರ್ತ ನಿಧಿಯಲ್ಲಿಡಲು ತೀರ್ಮಾನಿಸಲಾಗಿತ್ತು. ಆದರೆ, ಅಧ್ಯಕ್ಷರು ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ವೃಂದ ಬದಲಾವಣೆ ಹೆಸರಲ್ಲಿ 16 ಜನ ಸಿಬ್ಬಂದಿಯಿಂದ ತಲಾ ₹20 ಸಾವಿರ ದಂತೆ ₹3.20 ಲಕ್ಷ ವಸೂಲಿ ಮಾಡಲಾಗಿದೆ. ಬೈಲಾ ತಿದ್ದುಪಡಿ ಹೆಸರಲ್ಲಿ ₹3.50 ಲಕ್ಷ ಆದಾಯ ತೆರಿಗೆ ಹೆಸರಲ್ಲಿ ₹2.50 ಲಕ್ಷ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೊಳಲು ಶಾಖೆಯಿಂದ ₹9 ಲಕ್ಷ ಅಕ್ರಮವಾಗಿ ಪಡೆದಿದ್ದಾರೆ. ಅವ್ಯವಹಾರ ಬಯಲಾದ ಬಳಿಕ ₹14 ಲಕ್ಷ ಪಾವತಿಸಿದ್ದಾರೆ. ₹17.20 ಲಕ್ಷ ಪಾವತಿಸಬೇಕಿದೆ’ ಎಂದು ತಿಳಿಸಿದರು.

‘ಆಡಳಿತ ಮಂಡಳಿ ಅನುಮತಿ ಇಲ್ಲದೇ ತಮ್ಮದೇ ನಿವೇಶನವನ್ನು ಸಹಕಾರಿ ಹೆಸರಿಗೆ ಖರೀದಿಸಿದ್ದಾರೆ. ಗ್ರಾಹಕರ, ಷೇರುದಾರರ ಸಹಕಾರ, ಸಿಬ್ಬಂದಿಯ ಶ್ರಮದಿಂದ ಸಂಸ್ಥೆ ಉತ್ತಮವಾಗಿದೆ. ಆದರೆ. ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಂಡು ಅವ್ಯವಹಾರ ನಡೆಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಹಕಾರ ಇಲಾಖೆಗೆ ದೂರು ನೀಡಲಾಗಿದೆ. ನನ್ನ ಸಹೋದರ ಹಿಂದೆ ಅವ್ಯವಹಾರ ನಡೆಸಿದ್ದರೆ ಅವರ ವಿರುದ್ಧವೂ ದೂರು ನೀಡಿ ಕ್ರಮ ಜರುಗಿಸಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT