ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೋರಣಗಲ್ಲು | ನಿರಂತರ ಮಳೆ: ಭತ್ತದ ಬೆಳೆ, ರಸ್ತೆ ಜಲಾವೃತ

Published 20 ಆಗಸ್ಟ್ 2024, 15:59 IST
Last Updated 20 ಆಗಸ್ಟ್ 2024, 15:59 IST
ಅಕ್ಷರ ಗಾತ್ರ

ತೋರಣಗಲ್ಲು: ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳೆದರೋಜಿ, ಹೊಸದರೋಜಿ ಹಾಗೂ ಹಳೆಮಾದಾಪುರ ಗ್ರಾಮದ ಭತ್ತದ ಜಮೀನುಗಳು ಜಲಾವೃತವಾಗಿವೆ.

ವಿಠಲಾಪುರ ಗ್ರಾಮದಲ್ಲಿ 4 ಸೆ.ಮೀ. ಮಳೆ, ಕುರೆಕುಪ್ಪ 2.9 ಸೆ.ಮೀ. ಮಳೆಯಾಗಿದೆ. ಹೋಬಳಿಯ ಎಲ್ಲ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಕೆರೆ, ಚೆಕ್ ಡ್ಯಾಂ ನೀರಿನಿಂದ ಭರ್ತಿಯಾಗಿದ್ದು, ರೈತಾಪಿ ಜನ ಸಂತಸಗೊಂಡಿದ್ದಾರೆ.

ಮಂಗಳವಾರ ಸುರಿದ ಭಾರಿ ಮಳೆಗೆ ತೋರಣಗಲ್ಲು ಗ್ರಾಮದಿಂದ ಸಂಡೂರು, ಹೊಸಪೇಟೆ, ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೆಲ ಕಾಲ ಜಲಾವೃತವಾಗಿದ್ದರಿಂದ ಬೈಕ್, ಆಟೊ, ಕಾರು ಸೇರಿದಂತೆ ವಿವಿಧ ವಾಹನಗಳ ಸವಾರರು ಸಂಚಾರಕ್ಕಾಗಿ ಪರದಾಡಿದರು.

ರೈಲ್ವೆ ನಿಲ್ದಾಣ ಪ್ರದೇಶದಲ್ಲಿನ ಪ್ರಮುಖ ರಸ್ತೆಯಲ್ಲಿನ ಚರಂಡಿಯ ನೀರು ಮಳೆಯ ನೀರಿನೊಂದಿಗೆ ಗ್ಯಾರೇಜ್ ಶಾಪ್ ನ ಒಳಗೆ ನುಗ್ಗಿದ್ದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಪರಿತಪಿಸಿದರು. ಪಾದಚಾರಿಯ ರಸ್ತೆಯಲ್ಲಿ, ತರಕಾರಿ ಮಾರುಕಟ್ಟೆಯ, ಶಾಲಾ ಆವರಣದಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದರಿಂದ ಸಾರ್ವಜನಿಕರು, ಶಾಲಾ ಮಕ್ಕಳು ಪ್ರಯಾಸಪಟ್ಟು ಸಂಚರಿಸಿದರು.

ತೋರಣಗಲ್ಲು ಗ್ರಾಮದಲ್ಲಿನ ಅಂಚೆ ಕಚೇರಿ ಕಟ್ಟಡ ನಿರಂತರ ಮಳೆಯಿಂದ ಸೋರುತ್ತಿದ್ದು, ಕಚೇರಿ ಸಿಬ್ಬಂದಿ ಮಳೆ ನೀರಿನಲ್ಲಿಯೇ ಕೆಲಸ ನಿರ್ವಹಿಸಿದರು. ಕಟ್ಟಡದ ಸಿಮೆಂಟ್ ಕಾಂಕ್ರಿಟ್ ಕಿತ್ತುಹೋಗಿ ಕಬ್ಬಿಣದ ಸರಳುಗಳು ಹೊರ ಚಾಚಿದ್ದರಿಂದ ಸಿಬ್ಬಂದಿ ಪ್ರಾಣಭಯದಲ್ಲಿಯೇ ಕೆಲಸ ನಿರ್ವಹಿಸುತ್ತಿರುವ ದೃಶ್ಯ ಕಂಡು ಬಂತು.

ತೋರಣಗಲ್ಲು ಹೋಬಳಿಯ ಹಳೆದರೋಜಿ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಗೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ
ತೋರಣಗಲ್ಲು ಹೋಬಳಿಯ ಹಳೆದರೋಜಿ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಗೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ
ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿನ ಗ್ಯಾರೇಜ್ ಶಾಪ್ ಗೆ ಚರಂಡಿಯ ನೀರಿನೊಂದಿಗೆ ಮಳೆಯ ನೀರು ನುಗ್ಗಿದೆ
ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿನ ಗ್ಯಾರೇಜ್ ಶಾಪ್ ಗೆ ಚರಂಡಿಯ ನೀರಿನೊಂದಿಗೆ ಮಳೆಯ ನೀರು ನುಗ್ಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT