ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ದರ್ಶನ್‌ಗೆ 1 ಗಂಟೆ ಮಾತ್ರ ಕೊಠಡಿಯಿಂದ ಹೊರಬಂದು ಓಡಾಡಲು ಅವಕಾಶ

Published : 11 ಸೆಪ್ಟೆಂಬರ್ 2024, 16:00 IST
Last Updated : 11 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ, ನಟ ದರ್ಶನ್‌ಗೆ ದಿನಕ್ಕೆ 1 ಗಂಟೆ ಮಾತ್ರ ಕೊಠಡಿಯಿಂದ ಹೊರಬಂದು ಓಡಾಡಲು ಅವಕಾಶವಿದೆ.  

‘ಎಲ್ಲ ಕೈದಿಗಳಿಗೂ ಹಗಲಲ್ಲಿ ಜೈಲು ಆವರಣದಲ್ಲಿ ಓಡಾಡಲು ಮತ್ತು ಇತರ ಕೆಲಸದಲ್ಲಿ ತೊಡಗಲು ಅವಕಾಶವಿದೆ. ನಿಗದಿತ ಸಮಯಕ್ಕೆ ಎಲ್ಲರೂ ಲಾಕಪ್‌ ಸೇರಬೇಕು. ಆದರೆ, ವಿಶೇಷ ಭದ್ರತಾ ವಿಭಾಗದಲ್ಲಿ ಇರುವ ದರ್ಶನ್‌ಗೆ ಆ ಅವಕಾಶವಿಲ್ಲ. ಈ ವಿಭಾಗದಲ್ಲಿರುವ ಯಾರನ್ನೂ ಹೊರಗೆ ಬಿಡುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   

ದಿನಪೂರ್ತಿ ಬಂದಿ ಆಗಿರಲು ಬೇಸರಗೊಂಡಿರುವ ದರ್ಶನ್‌, ‘ಬೆಳಗ್ಗೆ ಮತ್ತು ಸಂಜೆ ಅರ್ಧ ಗಂಟೆ ಹೊರಗಿರಲು ಬಿಡಿ’ ಎಂದು ಜೈಲು ಅಧಿಕಾರಿಗಳಿಗೆ ಕೋರಿದ್ದಾರೆಂದು ಗೊತ್ತಾಗಿದೆ. 

‘ದರ್ಶನ್ ಕೊಠಡಿಗೆ ಟಿ.ವಿ ವ್ಯವಸ್ಥೆ ಇನ್ನೂ ಆಗಿಲ್ಲ. ಹಳೆಯ ಟಿ.ವಿ ದುರಸ್ತಿ ಆಗಿಲ್ಲ. ಹೊಸ ಟಿ.ವಿ ಕೊಡಲು ಅನುದಾನವಿಲ್ಲ. ಬೇಸರ ಕಳೆಯಲು ದರ್ಶನ್‌ಗೆ ಸಣ್ಣ ಕತೆಗಳು ಪುಸ್ತಕ, ಕೆಲ ಕಾದಂಬರಿಗಳನ್ನು ಕೊಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದರ್ಶನ್ ಭೇಟಿಗೆ ಕುಟುಂಬ: ‘ದರ್ಶನ್ ಪತ್ನಿ, ತಾಯಿ ಬುಧವಾರ ಭೇಟಿ ನೀಡುವ ನಿರೀಕ್ಷೆ ಇತ್ತು. ಆದರೆ, ಬರಲಿಲ್ಲ. ಗುರುವಾರ ಭೇಟಿಯಾಗುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT