ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ವಲಯ ಡಿಐಜಿ ಟಿ.ಪಿ ಶೇಷ, ‘ಪಿಪಿಸಿ’ ಹಣದಿಂದ ಯಾವುದೇ ಕೈದಿ ಜೈಲಿನೊಳಗಿನ ಕ್ಯಾಂಟೀನ್‌ನಲ್ಲಿ ವಸ್ತುಗಳನ್ನು ಕೊಳ್ಳಬಹುದು. ಹೊರಗಿನಿಂದ ಔಷಧ, ತೀರ ಅಗತ್ಯವಿರುವ ವಸ್ತುಗಳನ್ನೂ ತರಿಸಿಕೊಳ್ಳಬಹುದು. ವ್ಯಕ್ತಿಯೊಬ್ಬ ಜೈಲಿನ ಒಳಗೆ ಬಂದಾಗ ಅವನ ಬಳಿ ಇದ್ದ ಹಣವನ್ನು ಪಿಪಿಸಿಯಲ್ಲಿ ಇಡಲಾಗುತ್ತದೆ. ಕುಟುಂಬದವರೂ ಅದಕ್ಕೆ ಹಣ ಜಮೆ ಮಾಡಬಹುದು. ಇದೇನು ಗಳಿಸಿದ ಹಣವಲ್ಲ. ಸದ್ಯ ದರ್ಶನ್ ಅವರ ವಿಷಯದಲ್ಲಿ ಈ ಹಣ ಬೆಂಗಳೂರು ಜೈಲಿನಿಂದ ವರ್ಗಾವಣೆಯಾಗಿದೆ’ ಎಂದರು.