ಹೂವಿನಹಡಗಲಿ: ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಸಮುದಾಯದವರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶಾಸ್ತ್ರಿ ವೃತ್ತದಲ್ಲಿ ಸಮಾವೇಶಗೊಂಡಿತು.

ಚಿಂತಕ ಭಾಸ್ಕರ್ ಪ್ರಸಾದ್ ಮಾತನಾಡಿ, ‘ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆಪ ಹೇಳುತ್ತಿದ್ದಾರೆ. ಸದಾಶಿವ ಆಯೋಗದ ವೈಜ್ಞಾನಿಕ ವರದಿ ಪರಿಗಣಿಸದೆ, ನಾಗಮೋಹನ್ ದಾಸ್ ಸಮಿತಿ ರಚಿಸುವ ಮೂಲಕ ಮಾದಿಗ ಸಮುದಾಯಕ್ಕೆ ದ್ರೋಹ ಎಸಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯಾರ ಅಭಿಪ್ರಾಯ ಕೇಳದೆಯೂ ಪ್ರತ್ಯೇಕ ಲಿಂಗಾಯತ ಧರ್ಮದ ಪ್ರಸ್ತಾವವನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದ ಸಿ.ಎಂ, ಒಳ ಮೀಸಲಾತಿ ಜಾರಿಗೆ ಮಾತ್ರ ಕುಂಟು ನೆಪ ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಸಾಹಿತಿ ದೇವನೂರು ಮಹಾದೇವ ಅವರ ಹಿತ ಕಾಯುವ ಉದ್ದೇಶದಿಂದ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಮುದಾಯದ ಕೆಲ ರಾಜಕಾರಣಿಗಳು, ಹೋರಾಟಗಾರರು ಕಾಂಗ್ರೆಸ್ ಗುಲಾಮರಂತೆ ವರ್ತಿಸುತ್ತಿದ್ದಾರೆ. ಅವರಿಂದಾಗಿಯೇ 35 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಹಿನ್ನಡೆಯಾಗಿದೆ. ಸಮುದಾಯದವರು ಇಂತಹವರನ್ನು ನಂಬದೇ, ಮೀಸಲಾತಿ ಜಾರಿಯಾಗುವವರೆಗೂ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.

ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಿ ಮುನಿ ಸ್ವಾಮೀಜಿ ಮಾತನಾಡಿ, ‘ಜಾತಿ ವ್ಯವಸ್ಥೆಯಲ್ಲಿ ನಲುಗಿರುವ ಮಾದಿಗ ಸಮುದಾಯದ ಹಿತಕ್ಕಾಗಿ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ಸರ್ಕಾರ ಬಲಾಢ್ಯರಿಗೆ ಶಕ್ತಿ ತುಂಬಿ, ಬಲಹೀನರನ್ನು ಕಡೆಗಣಿಸುವುದು ಸಲ್ಲ’ ಎಂದರು.

ಮುಖಂಡರಾದ ಕೆ. ಉಚ್ಚಂಗೆಪ್ಪ, ಎಚ್. ಪೂಜಪ್ಪ, ಕೆ. ಪುತ್ರೇಶ, ಎಸ್. ನಿಂಗರಾಜ, ಜೆ. ಶಿವರಾಜ್ ಮಾತನಾಡಿದರು. ನಾಗರಾಜ, ಪಿ.ಎಂ. ವಿಲ್ಸನ್ ಸ್ವಾಮಿ, ಸ್ವಾಮಿ ಹೊಳಗುಂದಿ, ದುರುಗೇಶ, ಪಿ. ನಿಂಗಪ್ಪ, ಲಲಿತಮ್ಮ ಇದ್ದರು.

ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪಂಜರದಲ್ಲಿ ಬಂಧಿಸಿರುವುದು ಅಪಮಾನಕರ. ತಾಲ್ಲೂಕು ಆಡಳಿತ ಕೂಡಲೇ ಪಂಜರದಿಂದ ಮುಕ್ತಗೊಳಿಸಬೇಕು

ಭಾಸ್ಕರ್ ಪ್ರಸಾದ್ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.