ಕಂಪ್ಲಿ: ತಾಲ್ಲೂಕಿನ ದೇವಲಾಪುರ ಗ್ರಾಮದ ಕಂಡಲೇರು ಗೋತ್ರದ ಶ್ರೀ ನೀಲಿಗಿರಿ ಮಾನ್ಯ ಮತ್ತು ಶ್ರೀನೀಲಿಗಿರೇಶ್ವರ ಪಟ್ಟದ ದೇವರ ಕಾರ್ಯಕ್ರಮ ಅಂಗವಾಗಿ 33 ಜೋಡಿ ಉಚಿತ ಸಾಮೂಹಿಕ ವಿವಾಹ ಭಾನುವಾರ ಜರುಗಿದವು.

ಇದಕ್ಕೂ ಮುನ್ನ ಗಂಗೆ ಪೂಜೆ, ಮೆರವಣಿಗೆ, ದೇವರು ಪಟ್ಟ ಏರುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಭಕ್ತಿಯಿಂದ ನಡೆದವು.

ಬಳಿಕ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸಾಮಾನ್ಯ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮಕ್ಕಳ ಮದುವೆ ನೆರವೇರಿಸುವ ಕನಸಿಗೆ ಸಾಮೂಹಿಕ ವಿವಾಹ ಉತ್ತಮ ಮಾರ್ಗಗಳೆನಿಸಿವೆ. ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಕುಟುಂಬಗಳಲ್ಲಿ ಉಂಟಾಗುವ ಆರ್ಥಿಕ ಅಸಮತೋಲನವನ್ನು ಸಾಮೂಹಿಕ ವಿವಾಹ ತಪ್ಪಿಸಲಿವೆ. ಜೊತೆಗೆ ಸಾಮೂಹಿಕ ವಿವಾಹಗಳು ಒಗ್ಗಟ್ಟು, ಭಾವೈಕ್ಯತೆ, ಸಾಮರಸ್ಯವನ್ನು ಮೂಡಿಸುತ್ತವೆ ಎಂದು ತಿಳಿಸಿದರು.

ಹರಗಿನಡೋಣಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಆಶಿರ್ವಚನ ನೀಡಿದರು. ಬಳ್ಳಾರಿಯ ಒಡೆಯರ ಶರಣಯ್ಯ ಸ್ವಾಮಿ, ಒಡೆಯರ ರೋಹಿತ್ ಸ್ವಾಮಿ, ಒಡೆಯರ ಗುರುಲಿಂಗಯ್ಯಸ್ವಾಮಿ, ಒಡೆಯರ ಅಮಾಜಯ್ಯ ಸ್ವಾಮಿ, ಒಡೆಯರ ವಿರುಪಾಕ್ಷಯ್ಯ ಸ್ವಾಮಿ, ಒಡೆಯರ ಜಂಬಯ್ಯಸ್ವಾಮಿ, ಪ್ರಮುಖರಾದ ಕೆ. ಶ್ರೀನಿವಾಸರಾವ್, ಜಿ. ಮರೇಗೌಡ, ಜಿ. ಅಂಜಿನಪ್ಪ, ವೀರೇಶ ಗೌಡ, ಉಮೇಶ ಗೌಡ, ಸುರೇಶಗೌಡ, ಲಿಂಗನಗೌಡ, ಗೌಡ್ರು ಸಿದ್ಧಯ್ಯ, ಹೊಸಕೋಟೆ ಜಗದೀಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-25-563815064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.