ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗೆಗಡಲಲ್ಲಿ ತೇಲಿಸಿದ 'ಶ್ರೀಕೃಷ್ಣ ಸಂಧಾನ' ನಾಟಕ

Published 4 ಆಗಸ್ಟ್ 2024, 15:14 IST
Last Updated 4 ಆಗಸ್ಟ್ 2024, 15:14 IST
ಅಕ್ಷರ ಗಾತ್ರ

ತೆಕ್ಕಲಕೋಟೆ : 'ಜೀವನಕ್ಕೆ ಪೂರಕವಾಗಿರುವ ವಿಚಾರಗಳನ್ನು ಪುಸ್ತಕಗಳಿಂದ ತಿಳಿದುಕೊಳ್ಳಿ. ನಗೆ ನಾಟಕಗಳನ್ನು ನೋಡುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಿ' ಎಂದು ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಪಟ್ಟಣದ ಶರಣ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ದಿ. ಟಿ.ಎಂ ಪೊಂಪಯ್ಯ ಸ್ವಾಮಿ ಹಾಗೂ ಬಳೆಗಾರ ಮಲ್ಲಪ್ಪ ಇವರ ಸ್ಮರಣಾರ್ಥ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕಕ್ಕೆ ಕಲಾಭಿಮಾನಿಗಳು ಮನಸ್ಸು ಬಿಚ್ಚಿ ನಕ್ಕು ನಲಿದು, ಭರಪೂರ ಮನರಂಜನೆ ಪಡೆದರು.

ಕಲಾವಿದರಾದ ವಿಜಯಕುಮಾರ್, ಸುಮಿತ್ರಾ, ಕಾವ್ಯ, ಸುಮಂಗಲ, ರಮೇಶ್, ಭೀಮೇಶ್, ರಾಕೇಶ್, ಚಂದ್ರು, ಅಂಬರೀಷ್, ಮಹೇಶ್ ನಾಟಕಕ್ಕೆ ಜೀವಕಳೆ ತುಂಬಿದರು. ನಿವೃತ್ತ ಶಿಕ್ಷಕ ಎನ್ ಮಲ್ಲಯ್ಯ, ಪಿ. ಎಂ. ಜ್ಞಾನಾನಂದ ಸ್ವಾಮಿ, ಟಿ. ಎಂ,ಕಿರಣ್ ಕುಮಾರ್ ಜಿಎಂಜಿ ವೀರೇಶಪ್ಪ, ಕೆ. ವೀರೇಶಪ್ಪ, ಕೆ.ಎಂ ಪುಟ್ಟು ಸ್ವಾಮಿ, ಸದಾಕಲಿ ಜಿ, ಮನೋಹರ ಕೆ, ಸಂದೀಪ ಎಂ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT