ಬಳ್ಳಾರಿ: ‘ಮಾದಕ ವ್ಯಸನವು ಕುಟುಂಬಗಳನ್ನು ವಿಘಟಿಸಿ ಸಮಾಜದಲ್ಲಿ ಅಶಾಂತಿ ಮತ್ತು ಅಪರಾಧಗಳನ್ನು ಹೆಚ್ಚಿಸುವ ರಾಷ್ಟ್ರೀಯ ಸವಾಲಾಗಿದೆ. ಸದೃಢ ಭಾರತ ನಿರ್ಮಾಣಕ್ಕಾಗಿ ಯುವಶಕ್ತಿಯು ವ್ಯಸನ ಮುಕ್ತವಾಗುವುದು ಇಂದಿನ ಅತ್ಯಗತ್ಯ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಬಳ್ಳಾರಿ ನಗರದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್ಸಿ–ವಿಮ್ಸ್) ಮೈದಾನದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಬೋಧಿ ಫೌಂಡೇಷನ್ ಮತ್ತು ನಾರ್ಕೋಟಿಕ್ಸ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನದ ‘ವಾಕಥಾನ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬಸವಣ್ಣನವರಂತಹ ಮಹಾನ್ ಸಂತರ ಬೋಧನೆಗಳು ನಮಗೆ ಸದಾ ಸಂಯಮ ಮತ್ತು ಸದಾಚಾರದ ಹಾದಿಯನ್ನು ತೋರಿಸಿವೆ. ಅವರು ಮೆಟ್ಟಿದ ಈ ಪವಿತ್ರ ಮಣ್ಣಿನಲ್ಲಿ ಮಾದಕದ್ರವ್ಯಗಳ ಹಾವಳಿ ಹೆಚ್ಚುತ್ತಿರುವುದು ಆತಂಕಕಾರಿ’ ಎಂದರು.

‘ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಯುವಜನತೆಯಲ್ಲಿರುವ ಶಕ್ತಿಯು ದೇಶವನ್ನು ವಿಕಸಿತ ಭಾರತದ ಕೊಂಡೊಯ್ಯಲು ಸಹಕಾರಿಯಾಗಬೇಕು. ಮಾದಕ ದ್ರವ್ಯಗಳಿಂದ ಮುಕ್ತವಾಗಬೇಕು’ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ‘ಯುವಜನತೆ ಮಾದಕ ವ್ಯಸನದಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ, ಆರೋಗ್ಯವಂತ ಮತ್ತು ಸದೃಢ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದರು.

ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ನಿರ್ಮಾಣಕ್ಕಾಗಿ ಪ್ರತಿ ಕಾಲೇಜಿನಲ್ಲಿ ‘ಮಾದಕ ದ್ರವ್ಯ ವಿರೋ ಪಡೆ’ ರಚಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ವ್ಯಸನದಿಂದ ದೂರವಿದ್ದರಷ್ಟೇ ಸಾಲದು ತಮ್ಮ ಸುತ್ತಮುತ್ತಲಿನವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ಆಶಿಸಿದರು.

ಕ್ಯಾಥೋಲಿಕ್ ಬಿಷಪ್ ಹೆನ್ರಿ ಡಿಸೋಜ ಮಾತನಾಡಿ, ‘ಯುವಜನರು ಮಾದಕ ವ್ಯಸನದಿಂದ ಮುಕ್ತರಾಗಿ, ಉನ್ನತ ಸಾಧನೆಯ ಹಾದಿ ಹಿಡಿದಾಗ ಮಾತ್ರ ದೇಶಕ್ಕೆ ಭವಿಷ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕಮ್ಮರಚೇಡು ಶ್ರೀಕಲ್ಯಾಣಸ್ವಾಮಿ ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ ಮಾತನಾಡಿ, ‘ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ಸಾಮಾಜಿಕ ಮತ್ತು ನೈತಿಕ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ. ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಈ ದೇಹವು ಮತ್ತೊಬ್ಬರಿಗೆ ಆಸರೆಯಾಗುತ್ತದೆ ಎಂದರೆ ನಾವೆಲ್ಲರೂ ದೇಹದಾನ ಮಾಡಲು ಸಿದ್ಧರಿರಬೇಕು. ನಾವು ಸ್ವಾಮೀಜಿಗಳಾಗಿದ್ದರೂ ಈಗಾಗಲೇ ನೇತ್ರದಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದೇಹದಾನ ಮಾಡಲು ಕೂಡ ಸಿದ್ಧರಿದ್ದೇವೆ’ ಎಂದು ಘೋಷಿಸಿದರು.

ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇನ್ಸ್ಪೆಕ್ಟರ್ ವಿಕಾಸ್ ಸಿಂಗ್, ದಿಶಾಬೋದ್ ಫೌಂಡೇಷನ್ ನಿರ್ದೇಶಕ ಕೆ.ಶಿವವಾಗಿ ರೆಡ್ಡಿ, ಎಸ್.ಪಿ.ಚಿದಾನಂದ, ಜಾನೆಕುಂಟೆ ಬಸವರಾಜ್ ಇದ್ದರು.

ವಾಕಥಾನ್ಗೆ ರಾಜ್ಯಪಾಲ ಚಾಲನೆ

ಬಿಎಂಸಿಆರ್ಸಿ ಮೈದಾನದ ಆವರಣದಿಂದ ಆರಂಭವಾದ ನಶಾ ಮುಕ್ತ ಭಾರತ ಯುವ ಶುದ್ಧಿ ಅಭಿಯಾನದ ವಾಕಥಾನ್ ಸುಧಾ ಸರ್ಕಲ್ ಇನ್ಫ್ಯಾಂಟರಿ ರಸ್ತೆ ಕನಕದಾಸ ವೃತ್ತ ವಾಲ್ಮೀಕಿ ವೃತ್ತ ದುರ್ಗಮ್ಮ ಗುಡಿ ಮಾರ್ಗವಾಗಿ ಕಪ್ಪಗಲ್ಲು ರಸ್ತೆಯಿಂದ ಕಿತ್ತೂರುರಾಣಿ ಚೆನ್ನಮ್ಮ ಪ್ರೌಢಶಾಲೆ ಆವರಣದವರೆಗೆ ನಡೆಯಿತು. ಜಾಥಾದಲ್ಲಿ ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.