ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಗ್ಯಾರಂಟಿ ಯೋಜನೆ ಬಗ್ಗೆ 13.53 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹ

ಐದು ಗ್ಯಾರೆಂಟಿ ಕಾರ್ಯಕ್ರಮಗಳ ಕುರಿತು ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹ
Published : 7 ಆಗಸ್ಟ್ 2024, 5:37 IST
Last Updated : 7 ಆಗಸ್ಟ್ 2024, 5:37 IST
ಫಾಲೋ ಮಾಡಿ
Comments

ಬಳ್ಳಾರಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಂದ ಕಾರ್ಯಕ್ರಮಗಳ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. 

ಜಿಲ್ಲೆಯಲ್ಲಿ ಐದು ಗ್ಯಾರೆಂಟಿ ಕಾರ್ಯಕ್ರಮಗಳ ಒಟ್ಟು 16,05,293 ಫಲಾನುಭವಿಗಳ ಪೈಕಿ 13,53,720 (ಶೇ 84.33) ಸಮೀಕ್ಷೆಯನ್ನು ನಡೆಸಲಾಗಿದೆ. 2,51,573 ಫಲಾನುಭವಿಗಳು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ.   

ಬಳ್ಳಾರಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ 2,82,009 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಈ ಪೈಕಿ 1,92,565 ಫಲಾನುಭವಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇನ್ನೂ 89,444 ಗೃಹಲಕ್ಷ್ಮಿ ಫಲಾನುಭವಿಗಳು ಸಮೀಕ್ಷೆಯಲ್ಲಿ ಒಳಗೊಂಡಿಲ್ಲ.  

ಗೃಹಜ್ಯೋತಿ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 2,78,058 ಫಲಾನುಭವಿಗಳು ನೋಂದಣಿ ಆಗಿದ್ದಾರೆ. ಈ ಪೈಕಿ 2,48,596 ಫಲಾನುಭವಿಗಳ ಸಮೀಕ್ಷೆ ನಡೆದಿದೆ.  

ಅನ್ನಭಾಗ್ಯಕ್ಕೆ 11,04,688 ಫಲಾನುಭವಿಗಳು ನೋಂದಣಿಯಾಗಿದ್ದು 6,04,274 ಫಲಾನುಭವಿಗಳು ಸಮೀಕ್ಷೆಗೆ ಒಳಪಟ್ಟಿದ್ದಾರೆ. 5,89,858 ಮಂದಿ ಸಮೀಕ್ಷೆಯಿಂದ ಹೊರಗೆ ಉಳಿದಿದ್ದಾರೆ. 

ಇನ್ನು ಯುವನಿಧಿಯ 6,862 ಮಂದಿ, ಶಕ್ತಿ ಯೋಜನೆಯ 2,71,958 ಮಂದಿಯಿಂದಲೂ  ಅಭಿಪ್ರಾಯ ಸಂಗ್ರಹಿಸಲಾಗಿದೆ.  

ಯೋಜನೆಯ ಕುರಿತು, ಅವುಗಳ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸರ್ಕಾರವು ಗ್ಯಾರಂಟಿ ಸಮೀಕ್ಷೆ ನಡೆಸಿತ್ತು. ರಾಜ್ಯದಲ್ಲಿ ಒಟ್ಟು 7,84,99,351 ಫಲಾನುಭವಿಗಳ ಪೈಕಿ 4,88,49,341 ಜನರನ್ನು ಸಮೀಕ್ಷೆ ಒಳಗೊಂಡಿದೆ. 

ರಾಜ್ಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಬಿಎಂಪಿ,  ನಗರ ಮತ್ತು ಆರ್‌ಡಿಪಿಆರ್ ಸಮೀಕ್ಷಾಕಾರರು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಸಮೀಕ್ಷೆ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಆಶಾ ಕಾರ್ಯಕರ್ತರು 3,81,035, ಅಂಗನವಾಡಿ ಕಾರ್ಯಕರ್ತರು 9,72,685 ಮಂದಿಯನ್ನು ಸಮೀಕ್ಷೆಯಲ್ಲಿ ಮಾತನಾಡಿಸಿದ್ದಾರೆ. 

ಈ ಸಮೀಕ್ಷೆಯ ಮೂಲಕ ಗ್ಯಾರಂಟಿ ಯೋಜನೆಗಳು ಯಾವ ರೀತಿಯಲ್ಲಿ ಜನರನ್ನು ಮುಟ್ಟಿವೆ ಎನ್ನುವುದನ್ನು ಕಂಡುಕೊಳ್ಳಲು ಸರ್ಕಾರ ಮುಂದಾಗಿತ್ತು. 

ರಾಜ್ಯದಲ್ಲಿ ಗೃಹಜ್ಯೋತಿ ಸಮೀಕ್ಷೆಗೆ ಒಳಪಟ್ಟ ಶೇ 98ರಷ್ಟು ಫಲಾನುಭವಿಗಳು ಉಚಿತ ವಿದ್ಯುತ್ ತಮ್ಮ ಜೀವನ ಸುಧಾರಿಸಿದೆ ಎಂದಿದ್ದಾರೆ. ಶೇ 29ರಷ್ಟು ಜನರು ಹೆಚ್ಚಿನ ಅಧ್ಯಯನಕ್ಕೆ ಸಹಾಯ ಮಾಡಿದೆ ಎಂದಿದ್ದಾರೆ. ಶೇ 33ರಷ್ಟು ಜನರು ಹಣ ಉಳಿಸಿದೆ ಎಂದಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಶೇ 43ರಷ್ಟು ಫಲಾನುಭವಿಗಳು ಹಣವನ್ನು ಹಣ್ಣು, ತರಕಾರಿ ಖರೀದಿಸಲು ಬಳಸಿದ್ದೇವೆ ಎಂದಿದ್ದಾರೆ. ಶೇ 13ರಷ್ಟು ಮಂದಿ ಮಕ್ಕಳ ಶಾಲಾ ಶಿಕ್ಷಣಕ್ಕೆ, ಶೇ 15ರಷ್ಟು ಫಲಾನುಭವಿಗಳು ವೈದ್ಯಕೀಯ ವೆಚ್ಚ, ಶೇ 23ರಷ್ಟು ಫಲಾನುಭವಿಗಳು ಮನೆಯ ವೆಚ್ಚಕ್ಕೆ ಬಳಸಿದ್ದೇವೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಶಕ್ತಿ ಯೋಜನೆಯ ಸಮೀಕ್ಷೆಗೆ ಒಳಪಟ್ಟ ಶೇ 98ರಷ್ಟು ಜನರು ಉಚಿತ ಪ್ರಯಾಣದ ಪ್ರಯೋಜನ ಬಳಸುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ 90ರಷ್ಟು ಮಂದಿ ಅಕ್ಕಿಯ ಜೊತೆಗೆ ಬೇಳೆಕಾಳುಗಳು, ತೈಲ ಮತ್ತಿತರ ಆಹಾರ ಪದಾರ್ಥಗಳನ್ನು ಒದಗಿಸಿದರೆ ಉತ್ತಮ ಎಂದಿದ್ದಾರೆ. ಈ ಅಂಶಗಳು ಗ್ಯಾರಂಟಿ ಯೋಜನೆಗಳ ಸಮೀಕ್ಷೆಯಿಂದ ತಿಳಿದು ಬಂದಿವೆ ಎಂದು ಸರ್ಕಾರ ತಿಳಿಸಿದೆ.

ಸಮೀಕ್ಷೆಯಲ್ಲಿ ಬಳ್ಳಾರಿಗೆ 6ನೇ ಸ್ಥಾನ  

ಐದು ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮೀಕ್ಷೆಯಲ್ಲಿ ಶೇ 84.33ರಷ್ಟು ಸಾಧನೆ ಮಾಡಿರುವ ಬಳ್ಳಾರಿ ಜಿಲ್ಲೆ ಇಡೀ ರಾಜ್ಯದಲ್ಲೇ 6ನೇ ಸ್ಥಾನದಲ್ಲಿದೆ. ಶೇ 87.36 ರಷ್ಟು ಸಮೀಕ್ಷೆ ಮಾಡಿರುವ ಕಲಬುರಗಿ ಪ್ರಥಮ ಸ್ಥಾನದಲ್ಲಿದ್ದರೆ, ಶೇ 86.36ರಷ್ಟು ಸಮೀಕ್ಷೆ ಮಾಡಿರುವ ಮಂಡ್ಯ ಎರಡನೇ ಸ್ಥಾನದಲ್ಲಿದೆ. ಶೇ 86.12ರಷ್ಟು ಸಮೀಕ್ಷೆ ಮಾಡಿರುವ ಯಾದಗಿರಿ ಮೂರನೇ ಸ್ಥಾನದಲ್ಲಿದೆ.

ವಿಜಯನಗರಕ್ಕೆ 23ನೇ ಸ್ಥಾನ 

ಸಮೀಕ್ಷೆಯಲ್ಲಿ ವಿಜಯನಗರ ಜಿಲ್ಲೆ 23ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಶೇ 70.43ರಷ್ಟು ಸಮೀಕ್ಷೆ ನಡೆದಿದೆ. ಒಟ್ಟು 15,55,395 ಫಲಾನುಭವಿಗಳ ಪೈಕಿ 10,94,510 ಮಂದಿಯಿಂದ ಸಮೀಕ್ಷೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.  ಗೃಹಲಕ್ಷ್ಮಿಯ 1,95,007, ಗೃಹಜ್ಯೋತಿಯ  2,35,986, ಯುವನಿಧಿಯ 21,883, ಅನ್ನಭಾಗ್ಯದ 4,32,812, ಶಕ್ತಿ ಯೋಜನೆಯ 2,09,722 ಮಂದಿಯನ್ನು ಸಮೀಕ್ಷೆ ಮಾಡಲಾಗಿದೆ.  ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 9.22ರಷ್ಟು ಮಾತ್ರ ಸಮೀಕ್ಷೆ ನಡೆದಿದ್ದು, ಇಡೀ ರಾಜ್ಯದಲ್ಲೇ ಕೊನೇ ಸ್ಥಾನದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT