ತೆಕ್ಕಲಕೋಟೆ: ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ, ಸಮರ್ಪಕ ಕುಡಿಯುವ ನೀರು ಸರಬರಾಜು, ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸಿರುಗುಪ್ಪ ತಾಲ್ಲೂಕಿನ ಎಚ್. ಹೊಸಹಳ್ಳಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ಎಚ್. ಹೊಸಹಳ್ಳಿ ಗ್ರಾಮ ಪಂಚಾಯಿತಿ 2024-25ನೇ ಸಾಲಿನಲ್ಲಿ ಮನರೇಗಾ ಯೋಜನೆ, ಕುಡಿಯುವ ನೀರಿನ ನಿರ್ವಹಣೆ, ಆಕರ್ಷಕ ಕೂಸಿನ ಮನೆ, ಉತ್ತಮ ಗ್ರಂಥಾಲಯ, ಸ್ವಚ್ಛ ಭಾರತ ಯೋಜನೆ, ತೆರಿಗೆ ಪರಿಷ್ಕರಣೆ ಹಾಗೂ ಉತ್ತಮ ಆಡಳಿತಕ್ಕಾಗಿ ಮಾಡಿರುವ ಉತ್ತಮ ಕೆಲಸಗಳನ್ನು ಪರಿಗಣಿಸಿ ಗ್ರಾಮ ಪಂಚಾಯಿತಿಯು ಗಾಂಧಿಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ಕಸ ಸಂಗ್ರಹ, ಕರ ವಸೂಲಾತಿಗೆ ಮಹಿಳೆಯರ ಸಾಥ್: ಎಚ್. ಹೊಸಳ್ಳಿ ಹಾಗೂ ಹಾಗಲೂರು ಗ್ರಾಮಗಳ ಕಸ ಸಂಗ್ರಹವನ್ನು ಗಂಗೋತ್ರಿ, ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರು ನಿರ್ವಹಿಸುತ್ತಿದ್ದು, ಕಸ ಸಂಗ್ರಹ ಶುಲ್ಕವನ್ನು ಮಹಿಳೆಯರೆ ವಸೂಲಿ ಮಾಡಿ ಪಂಚಾಯಿತಿಗೆ ಸಂದಾಯ ಮಾಡುತ್ತಾರೆ.

ಕರ ವಸೂಲಾತಿಯಲ್ಲಿ ಗ್ರಾಮ ಪಂಚಾಯಿತಿಯು ಗಮನಾರ್ಹ ಸಾಧನೆಯನ್ನು ಮಾಡಿದ್ದು, 2024-25 ನೇ ಸಾಲಿನ ಒಟ್ಟು 8,278 ಆಸ್ತಿಗಳ ವಾರ್ಷಿಕ ₹13.90 ಲಕ್ಷದ ಗುರಿಯಲ್ಲಿ ₹11.14 ಲಕ್ಷ ವಸೂಲಿ ಮಾಡುವ ಮೂಲಕ ಶೇ 97.63 ಸಾಧನೆಯನ್ನು ಮಾಡಿದೆ.

ಎರಡೂ ಗ್ರಾಮಗಳ ಎಲ್ಲಾ ಬೀದಿಗಳಲ್ಲಿ ಎಲ್ಇಡಿ ದೀಪದ ವ್ಯವಸ್ಥೆ ಹಾಗೂ ಮುಖ್ಯರಸ್ತೆಗಳಿಂದ ಹಿಡಿದು ಪ್ರಮುಖ ಬೀದಿಗಳ ನಾಮ ಫಲಕಗಳನ್ನು ಹಾಕಿ ಆಕರ್ಷಕಗೊಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-25-1881627529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.