ಸಂಘದ ಮುಖಂಡರಾದ ಬಿ.ಮಾಳಮ್ಮ ಮಾತನಾಡಿ, ನೂರಾರು ವರ್ಷಗಳಿಂದ ಸ್ಮಶಾನಗಳಲ್ಲಿ ಶವ ಹೂಳುವ , ಸುಡುವ, ಹಲಗೆ ಬಾರಿಸುವ ಮತ್ತು ಸ್ಮಶಾನಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಇದುವರೆಗೂ ಉಚಿತವಾಗಿ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿ ನೂರಾರು ಕುಟುಂಬಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿವೆ. ಇದನ್ನು ಸಾರ್ವಜನಿಕರ ಸೇವೆಯೆಂದು ಇದುವರೆಗೂ ಯಾರೂ ಗುರುತಿಸಿಲ್ಲ. ಆದ್ದರಿಂದ ಉಚಿತ ಕೆಲಸದಿಂದ ಮುಕ್ತಿಗೊಳಿಸಿ ವೇತನ ನೀಡುವಂತೆ ಆಗ್ರಹಿಸಿದರು.