ಕುರುಗೋಡು: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಭಾರಿ ಮಳೆಗೆ ರೈತರು ತತ್ತರಿಸಿದ್ದಾರೆ.

ಜಿಲ್ಲೆಯಲ್ಲಿಯೇ ಅತಿಹೆಚ್ಚು 4.3 ಸೆ.ಮೀ ಮಳೆಯಾದ ಬಗ್ಗೆ ಇಲ್ಲಿನ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.

ಪಟ್ಟಣದಲ್ಲಿ ಭಾರಿ ಮಳೆಗೆ ಗಿಡಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ರಾತ್ರಿ 12 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಜೆಸ್ಕಾಂ ಸಿಬ್ಬಂದಿ ತೆರುವು ಕಾರ್ಯಾಚರಣೆ ನಡೆಸಿದ ನಂತರ ವಿದ್ಯುತ್ ಸರಬರಾಜುಗೊಂಡಿತು.

ಕುರುಗೋಡು ಸೇರಿದಂತೆ ಗೆಣಿಕೆಹಾಳು, ಮುಷ್ಟಗಟ್ಟೆ ಮತ್ತು ಬಾದನಹಟ್ಟಿ ಗ್ರಾಮಗಳಲ್ಲಿ ಕಟಾವಿನ ಹಂತದಲ್ಲಿದ್ದ ಭತ್ತದ ತೆನೆಯಿಂದ ಅಪಾರಪ್ರಮಾಣ ಕಾಳು ಉದುರಿಬಿದ್ದು ನಷ್ಟಸಂಭವಿಸಿದೆ.

ತಹಶೀಲ್ದಾರ್ ನರಸಪ್ಪ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ನಷ್ಟಹೊಂದಿದ ಭತ್ತದ ಗದ್ದೆಗಳಿಗೆ ಬುಧವಾರ ಭೇಟಿನೀಡಿ ರೈತರಿಂದ ಮಾಹಿತಿ ಪಡೆದರು. ತಾಲ್ಲೂಕಿನಲ್ಲಿ 1598 ಎಕರೆಯಲ್ಲಿ ಭತ್ತ ಬೆಳೆಯಲಾಗಿದ್ದು, ಅದರಲ್ಲಿ 550 ಎಕರೆಯಷ್ಟು ಭತ್ತದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್ ನರಸಪ್ಪ ಮಾಹಿತಿ ನೀಡಿದರು.

ತುಂಗಭದ್ರಾ ಕ್ಟಸ್ಟ್ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಈ ವರ್ಷ ಬೇಸಿಗೆ ಬೆಳೆ ಬೆಳೆಯಲು ಕಾಲುವೆಗೆ ನೀರು ಹರಿಸಿಲ್ಲ. ಪಂಪ್ಸೆಟ್ ಆಧಾರಿತ ಭೂಮಿಯಲ್ಲಿ ಭತ್ತದ ಬೆಳೆ ಬೆಳೆಯಲು ಹರಸಾಹಸ ಪಟ್ಟಿದ್ದ ರೈತರಿಗೆ ಅಕಾಲಿಕ ಮಳೆ ಲಾಭದ ನಿರೀಕ್ಷೆಗೆ ತಣ್ಣೀರೆರಚಿದೆ.

ಒತ್ತಾಯ: ಕಾಲುವೆಗೆ ನೀರಿಲ್ಲದಿದ್ದರೂ ಹರಸಾಹಸ ಪಟ್ಟು ಬೇಸಿಗೆ ಹಂಗಾಮಿನ ಭತ್ತ ಬೆಳೆದ ರೈತರಿಗೆ ಅಕಾಲಿಕ ಮಳೆ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ. ಒಂದು ಎಕರೆಗೆ ಕನಿಷ್ಟ ₹50 ಸಾವಿರ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ವಿ.ಎಸ್.ಶಿವಶಂಕರ್ ಮತ್ತು ಗಾಳಿ ಬಸವರಾಜ ಇವರು ಮನವಿ ಸಲ್ಲಿಸಿ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದರು. ಮನವಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ನರಸಪ್ಪ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಪರಿಹಾರಕ್ಕೆ ಮನವಿಮಾಡಲಾಗುವುದು ಎಂದು ತಿಳಿಸಿದರು.

ಬನ್ನಿಗೋಳ: ನೆಲಕ್ಕೊರಗಿದ ಬಾಳೆ, ಮೆಕ್ಕೆಜೋಳ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಗೋಳ ಗ್ರಾಮದಲ್ಲಿ ರೈತ ನಿಂಗಾರೆಡ್ಡಿ ಅವರ 2.5 ಎಕರೆ ಜಮೀನಿನಲ್ಲಿದ್ದ ಏಲಕ್ಕಿ ಬಾಳೆ ಸಂಪೂರ್ಣ ನೆಲಕಚ್ಚಿದೆ.

ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೀಸಿದ ಗಾಳಿಯ ರಭಸಕ್ಕೆ ಕಟಾವಿಗೆ ಬಂದಿದ್ದ ಎಲ್ಲ 3ಸಾವಿರ ಗಿಡಗಳು ನೆಲಕ್ಕೆ ಉರುಳಿವೆ, ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಗ್ರಾಮದ ವೆಂಕನಗೌಡ ಎನ್ನುವವರ ಜಮೀನಿನಲ್ಲಿ 5ಎಕರೆ ಮೆಕ್ಕೆಜೋಳ ನೆಲಕ್ಕೊರಗಿದೆ. ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ನಷ್ಟ ಸಂಭವಿಸಿದ್ದು ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ರೈತ ಮುಖಂಡ ಮೈನಳ್ಳಿ ಕೊಟ್ರೇಶಪ್ಪ ವಿನಂತಿಸಿಕೊಂಡಿದ್ದಾರೆ.

ಗಾಳಿ, ಮಳೆಗೆ ನೆಲಕ್ಕೊರಗಿದ 2 ಎಕರೆ ಬಾಳೆ ತೋಟ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಕೆಲವೆಡೆ ಮಂಗಳವಾರ ರಾತ್ರಿ ಗಾಳಿ ಸಹಿತ ಮಳೆಯಾಗಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ರೈತ ಪ್ರಭುರೆಡ್ಡಿ ಎಂಬುವವರ ಎರಡು ಎಕರೆ ಬಾಳೆ ತೋಟ ಸಂಪೂರ್ಣ ನೆಲಕಚ್ಚಿದೆ.

ಈ ತೋಟದಲ್ಲಿ ಬಾಳೆಗಿಡಗಳು ಗೊನೆಬಿಟ್ಟು ಕಟಾವಿನ ಹಂತಕ್ಕೆ ಬಂದಿದ್ದವು. ಉತ್ತಮ ಇಳುವರಿ ಕೂಡ ಬಂದಿತ್ತು. ಯುಗಾದಿಯ ಬಳಿಕ ಕಟಾವು ಮಾಡಲು ನಿರ್ಧರಿಸಿದ್ದರು. ಸುಮಾರು ₹8 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.