ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ ತಮ್ಮ ವಿದ್ಯಾರ್ಥಿಗಳನ್ನೆಲ್ಲ ಶವದ ಎದುರು ನಿಲ್ಲಿಸಿ ರಾಷ್ಟ್ರಗೀತೆ ಹಾಡಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

ಜ.28ರಂದು ಶ್ರೀಧರಗಡ್ಡೆಯಲ್ಲಿ ಸಣ್ಣಕ್ಕಿ ಕಾಮಾಕ್ಷಮ್ಮ ಎಂಬುವರು ಮೃತಪಟ್ಟಿದ್ದರು. ಗ್ರಾಮದ ‘ಶ್ರೀ ಗುರು ಸಂಗನ ಬಸವೇಶ್ವರ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆ’ಯ ವಿದ್ಯಾರ್ಥಿಗಳನ್ನೆಲ್ಲ ಕರೆದೊಯ್ದಿದ್ದ ಮುಖ್ಯಶಿಕ್ಷಕ ಎಂ. ಹನುಮಂತಪ್ಪ ಸಾಲಾಗಿ ನಿಲ್ಲಿಸಿ ರಾಷ್ಟ್ರಗೀತೆ ಹಾಡಿಸಿದ್ದಾರೆ. ಈ ಘಟನೆಯನ್ನು ಖಂಡಿಸಿರುವ ಗ್ರಾಮದ ಕೆಲ ಮಂದಿ ವಿಡಿಯೊ ಸಹಿತ ಫೆಬ್ರುವರಿ 16ರಂದು ಜಿಲ್ಲಾಡಳಿತಕ್ಕೆ ದೂರು ಅರ್ಜಿ ನೀಡಿದ್ದಾರೆ.

ರಾಷ್ಟ್ರಗೀತೆಗೆ ಸಂಬಂಧಿಸಿದ ಕೇಂದ್ರದ ಗೃಹ ಇಲಾಖೆಯ ಆದೇಶದಲ್ಲಿ, ರಾಷ್ಟ್ರಗೀತೆಯನ್ನು ಯಾವಾಗ ನುಡಿಸಬಹುದು ಅಥವಾ ಹಾಡಬಹುದು ಎಂಬುದರ ಪಟ್ಟಿ ಮಾಡಲಾಗಿದೆ. ಅದರಲ್ಲಿ ಖಾಸಗಿ ವ್ಯಕ್ತಿಯ ಶವದ ಎದುರು ಗೀತೆ ಹಾಡಬಹುದು ಎಂಬುದನ್ನು ಪಟ್ಟಿ ಮಾಡಿಲ್ಲ. ಹೀಗಾಗಿ ವ್ಯಕ್ತಿಯೊಬ್ಬರ ಶವದ ಎದುರು ವಿದ್ಯಾರ್ಥಿಗಳನ್ನು ನಿಲ್ಲಿಸಿ ರಾಷ್ಟ್ರಗೀತೆ ಹಾಡಿಸುವುದು ಅಪಮಾನಕಾರಿ.

ಪ್ರಕರಣವೊಂದರಲ್ಲಿ 1986ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ‘ವಿದ್ಯಾರ್ಥಿಗಳ ಆತ್ಮಸಾಕ್ಷಿ ಅಥವಾ ನಂಬಿಕೆಗಳನ್ನು ಮೀರಿ, ರಾಷ್ಟ್ರಗೀತೆಯನ್ನು ಹಾಡಲು ಒತ್ತಾಯಿಸುವಂತಿಲ್ಲ. ಅದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಹೇಳಿತ್ತು.

ನಮ್ಮಿಂದ ತಪ್ಪಾಗಿದೆ. ಈ ಬಗ್ಗೆ ನಾನು ಕ್ಷಮೆ ಕೋರಲು ಸಿದ್ಧ. ಶಿಕ್ಷಣ ಇಲಾಖೆ ಅಧಿಕಾರಿಗಳೂ ಶಾಲೆಗೆ ಬಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಹೀಗೆ ಆಗದು.
– ಹನುಮಂತಪ್ಪ, ಶಾಲೆಯ ಮುಖ್ಯ ಶಿಕ್ಷಕ

ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಅಧಿಕಾರಿಗಳನ್ನು ರವಾನಿಸಿ ವರದಿ ಪಡೆದಿದ್ದಾರೆ. ಅವರು ಕ್ರಮ ಕೈಗೊಳ್ಳಲಿದ್ದಾರೆ. ಆ ಬಳಿಕ ವರದಿ ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ.
– ಉಮಾದೇವಿ, ಉಪನಿರ್ದೇಶಕಿ, ಶಾಲಾ ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.