ಹರಪನಹಳ್ಳಿ: ಪಟ್ಟಣ ಒಳಗೊಂಡು ತಾಲ್ಲೂಕಿನಾದ್ಯಂತ ಬುಧವಾರ ಬೆಳಗಿನ ಜಾವ ಸರಾಸರಿ 3.5 ಸೆಂ.ಮೀ, ದಾಖಲೆ ಪ್ರಮಾಣದ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ. ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ತಾಲ್ಲೂಕಿನ ಬೆಣ್ಣಿಹಳ್ಳಿಯಲ್ಲಿ ರೇವಣ್ಣ, ಹಳ್ಳಿಕೇರಿಯ ಪರಶುರಾಮಪ್ಪ ಹಾಗೂ ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸುರಿದಿರುವ ಮಳೆಗೆ ಕಟ್ಟೆ, ಹಳ್ಳ, ಕೆರೆಗಳಿಗೆ ಉತ್ತಮ ನೀರು ಹರಿದುಬಂದಿದೆ. ಸೊಂಪಾಗಿ ಬೆಳೆದಿದ್ದ ಬೆಳಗಳಿಗೆ ಉತ್ತಮ ಮಳೆಯಿಂದ ಕಾಳುಗಳು ಗಟ್ಟಿಗೊಂಡು ಉತ್ತಮ ಇಳುವರಿಗೆ ಅನುಕೂಲವಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಳೆ ವರದಿ: ಹರಪನಹಳ್ಳಿ –2.4 ಸೆಂ.ಮೀ, ಅರಸೀಕೆರೆ –4, ಚಿಗಟೇರಿ –4, ಹಿರೆಮೇಗಳಗೆರೆ –4.9, ಉಚ್ಚಂಗಿದುರ್ಗ 4.7, ಹಲವಾಗಲು –1.7 ಸೆಂ.ಮೀ.ನಷ್ಟು ಮಳೆ ಸುರಿದಿದೆ ಎಂದು ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ತಿಳಿಸಿದ್ದಾರೆ.
ಹರಪನಹಳ್ಳಿ ತಾಲ್ಲೂಕು ಬೆಣ್ಣಿಹಳ್ಳಿಯಲ್ಲಿ ರೇವಣ್ಣ ಅವರ ಮಾಳಿಗೆ ಮನೆ ಕುಸಿದಿರುವುದು.