ಕಂಪ್ಲಿ(ಬಳ್ಳಾರಿ): ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ತಡರಾತ್ರಿ ಉತ್ತಮ ಮಳೆಯಾಗಿದೆ.
ರಾತ್ರಿಯಿಡೀ 8.14 ಸೆಂ.ಮೀ ಮಳೆ ಸುರಿದಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಹಳ್ಳಗಳು ತುಂಬಿಹರಿಯುತ್ತಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿವೆ.
ಜವುಕು-ಜೀರಿಗನೂರು ಮತ್ತು ಚಿನ್ನಾಪುರ-ಮೆಟ್ರಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.
ರಾಜ್ಯ ಹೆದ್ದಾರಿ-29ರ ಮಾರೆಮ್ಮ ದೇವಸ್ಥಾನ ಬಳಿ ರಭಸದ ಮಳೆಗೆ ರಸ್ತೆ ಒಂದು ಭಾಗಕ್ಕೆ ಹಾನಿಯಾಗಿ ಸಂಚಾರ ವ್ಯತ್ಯಯವಾಗಿದೆ.
ತಾಲ್ಲೂಕಿನ ದೇವಲಾಪುರ ಉಡುವಿನ ಹಳ್ಳವು ಭರ್ತಿಯಾಗಿದ್ದು, ಗದ್ದೆಗಳು ಜಲಾವೃತವಾಗಿವೆ. ದೇವಲಾಪುರ ಗ್ರಾಮದ ರಾಜನ ಮಟ್ಟಿಯ ಚರಂಡಿ ಭರ್ತಿಯಾಗಿ ಗ್ರಾಮ ಪಂಚಾಯತಿ ಬಳಿಯ ಸುಮಾರು 20ಮನೆಗಳಿಗೆ ನೀರು ನುಗ್ಗಿದೆ.