ಕುಡತಿನಿ (ಸಂಡೂರು): ಪಟ್ಟಣದ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಕುಡತಿನಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಭೂಸಂತ್ರಸ್ಥರು ಮಂಗಳವಾರ ಲಕ್ಷ್ಮಿ ಮಿತ್ತಲ್ ಕೈಗಾರಿಕೆಗಾಗಿ ಸ್ವಾಧೀನ ಮಾಡಿದ ಭೂಮಿಯಲ್ಲಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ಮುಂದಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು

ಭೂಸಂತ್ರಸ್ಥರ ಹೋರಾಟ ಸಮಿತಿಯ ಸಂಚಾಲಕ ಎಂ ತಿಪ್ಪೇಸ್ವಾಮಿ ಮಾತನಾಡಿ, ' ಲಕ್ಷ್ಮಿ ಮಿತ್ತಲ್ ಕೈಗಾರಿಕೆಯ ಸ್ಥಾಪನೆಗಾಗಿ ವಶಪಡಿಸಿಕೊಂಡ ಜಮೀನಿನಲ್ಲಿ ಜಿಂದಾಲ್ ಕಂಪನಿಯು ಸಣ್ಣ ಪ್ರಮಾಣದ ಕೈಗಾರಿಕೆಯನ್ನು ಆರಂಭ ಮಾಡಲು ತಯಾರಿ ನಡೆಸಿರುವುದು ಖಂಡನೆಯವಾಗಿದ್ದು, ರಾಜ್ಯ ಸರ್ಕಾರವು ಬಡ ರೈತರ ಭೂ ಬೆಲೆ ಪರಿಹರಿಸುವ ಬದಲಿಗೆ ಜಿಂದಾಲ್ ಕಂಪನಿ ಜೊತೆ ಕೈ ಜೋಡಿಸಿ ಅವರಿಗೆ ಭೂಮಿ ಹಸ್ತಾಂತರಿಸುವ ಗಂಭೀರ ಪ್ರಯತ್ನ ನಡೆಸಿದ್ದಾರೆ. ಜಿಲ್ಲಾಡಳಿತದ ಬೆಂಬಲದಿಂದ ದೌರ್ಜನ್ಯಯುತವಾಗಿ ಪ್ರವೇಶಿಸಲು ಕ್ರಮವಹಿಸುತ್ತಿದ್ದು, ಸಾವಿರಾರು ರೈತರು ಉಗ್ರವಾದ ಪ್ರತಿಭಟನೆ ತಯಾರಿ ನಡೆಸಿದೆ. ರೈತರ ಬಂಧನ, ಮುಂದಿನ ಗಂಭೀರವಾದ ಬೆಳವಣಿಗೆಗೆ ರಾಜ್ಯ ಸರ್ಕಾರವೇ ನೇರ ಕಾರಣವಾಗಲಿದೆ. ಈ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು. ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ. ಕ್ರಮವಹಿಸದೆ. ದೌರ್ಜನ್ಯಗಳ ಮೂಲಕ. ರೈತರನ್ನು ಒಕ್ಕಲಿಬ್ಬಿಸುವ ಕೆಲಸಕ್ಕೆ ಮುಂದಾಗಿರುವುದು ಖಂಡದ ವಿಚಾರವಾಗಿದೆ'ಎಂದರು

ರೈತ ಮುಖಂಡರಾದ ಜಂಗ್ಲಿಸಾಬ್, ಶಿವಕುಮಾರ್ ಸಂಪತ್ ಕುಮಾರ್, ರಮೇಶ್, ವೀರೇಶ್, ಮಲ್ಲಿಕಾರ್ಜುನ, ವಿವಿಧ ಗ್ರಾಮಗಳ ಭೂಸಂತ್ರಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.