ಕಂಪ್ಲಿ: ತಾಲ್ಲೂಕಿನ ಹಂಪಾದೇವನಹಳ್ಳಿ ಗ್ರಾಮದಲ್ಲಿ ಮಾವಿನಹಳ್ಳಿಯ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಆಶ್ರಯದಲ್ಲಿ ಭಾವಗೀತೆ ಮತ್ತು ಬಯಲಾಟ ಪ್ರದರ್ಶನ ಬುಧವಾರ ಜರುಗಿತು.

ಎಚ್.ಲೋಕರಾಜ್ ತಂಡದವರು ಭಾವಗೀತೆ ಪ್ರಸ್ತುತಪಡಿಸಿದರು. ಕೆ.ಪಂಪಾಪತಿ, ಎಚ್.ಆರ್. ಪ್ರವೀಣ್ಕುಮಾರ್, ರೇಣುಕಾರಾಜ, ಬಿ.ಕೆ. ಸಿದ್ದಪ್ಪ ಧರ್ಮಪ್ಪ ತಂಡದವರು ಪ್ರದರ್ಶಿಸಿದ ಬಯಲಾಟ ಪ್ರದರ್ಶನ ನೆರೆದಿದ್ದ ಶಾಲಾ ಮಕ್ಕಳ ಮತ್ತು ಗ್ರಾಮಸ್ಥರ ಮನಸೂರೆಗೊಂಡಿತು.

ಇದಕ್ಕೂ ಮುನ್ನ ಕುಡುತಿನಿಯ ಹಾರ್ಮೋನಿಯಂ ಮಾಸ್ಟರ್ ಡಿ.ಎಂ.ಮಂಜುನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಬಯಲಾಟ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಬಯಲಾಟ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅದರಿಂದ ಕಲಾವಿದರಿಗೆ ಅನುಕೂಲವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಬಲಾ ವಾದಕ ಚಾಗೆ ವರಬಸಪ್ಪ ಮಾತನಾಡಿ, ಬಯಲಾಟ ಪ್ರದರ್ಶನಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಖರ್ಚು ತಗುಲುವುದರಿಂದ ಈ ಕಲೆ ಇಂದು ಜನಮಾನಸದಿಂದ ದೂರ ಸರಿಯುತ್ತಿದೆ. ಕರ್ನಾಟಕ ಬಯಲಾಟ ಅಕಾಡೆಮಿಯವರು ಗಮನಹರಿಸಿ ಪ್ರಸ್ತುತ ಕಲೆ ಪೋಷಿಸುವಂತೆ ಮನವಿ ಮಾಡಿದರು.

ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಗುರುಮಹಾಂತೇಶ, ಕಾರ್ಯದರ್ಶಿ ಕುರುಬರ ಹೇಮೇಶ್ವರ, ಎಸ್ಡಿಎಂಸಿ ಅಧ್ಯಕ್ಷ ಗುರುಮೂರ್ತಿ, ಬಯಲಾಟ ಕಲಾವಿದ ಕಂದಾರ್ ತಿಪ್ಪೇಸ್ವಾಮಿ, ಶಿಕ್ಷಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-25-309954228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.