ಕಂಪ್ಲಿ: ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ₹1.50 ಕೋಟಿ ವೆಚ್ಚದ ಜೆಸ್ಕಾಂ ಉಪ ವಿಭಾಗ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಜೆ.ಎನ್. ಗಣೇಶ್ ಶನಿವಾರ ಭೂಮಿಪೂಜೆ ನೆರವೇರಿಸಿದರು.

‘ಪಟ್ಟಣದಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ಮಾದರಿಯಲ್ಲಿ ₹10 ಕೋಟಿ ವೆಚ್ಚದಲ್ಲಿ 11 ಮೀಟರ್ ಎತ್ತರದ ಸ್ಪನ್ ಪೋಲ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಇದರಿಂದ ಪಟ್ಟಣದ ಮೆರುಗು ಇನ್ನಷ್ಟು ಹೆಚ್ಚಲಿದೆ’ ಎಂದು ಶಾಸಕ ಜೆ.ಎನ್. ಗಣೇಶ ತಿಳಿಸಿದರು.

ಬಳ್ಳಾರಿ ಜೆಸ್ಕಾಂ ಗ್ರಾಮೀಣ ವಿಭಾಗದ ಇಇ ಹುಸೇನ್ಸಾಬ್ ಮಾತನಾಡಿ, ‘ವಿದ್ಯುತ್ ಅವಘಡ ತಪ್ಪಿಸಲು ಶಾಸಕರ ಸೂಚನೆಯಂತೆ ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕುಗಳಲ್ಲಿ ಇನ್ಸುಲೆಟೆಡ್ ಕಂಡಕ್ಟರ್ (ಎಬಿ ಕೇಬಲ್, ಇನ್ಸುಲೇಟಿಂಗ್ ಕವರ್ಡ್ ಕಂಡಕ್ಟರ್) ಗಳನ್ನು ಅಳವಡಿಸಲಾಗುವುದು. ಕಂಪ್ಲಿಯಲ್ಲಿ ₹ 2.93 ಕೋಟಿ ಮತ್ತು ಕುರುಗೋಡಿನಲ್ಲಿ ₹ 1.29ಕೋಟಿ ವೆಚ್ಚದಲ್ಲಿ ಇನ್ಸುಲೆಟೆಡ್ ಕಂಡಕ್ಟರ್ಗಳನ್ನು ಅಳವಡಿಕೆ ಕಾಮಗಾರಿ ಟೆಂಡರ್ ಹಂತದಲ್ಲಿದೆ’ ಎಂದು ತಿಳಿಸಿದರು.

ಜೆಸ್ಕಾಂ ಇಇ ಮೊಹಿನಿದ್ದೀನ್, ಎಇಇ ಕೆ. ಶ್ರೀನಿವಾಸಪ್ರಸಾದ್, ಕುರುಗೋಡು ಎಇಇ ಶೇಖ್ ಮಹ್ಮದ್ ಜಾಫರ್, ಕೆ. ಶ್ರೀನಿವಾಸರಾವ್, ಎನ್. ಹಬೀಬ್ರೆಹಮಾನ್, ಜಿ. ರಾಮಣ್ಣ, ಎ.ಸಿ. ದಾನಪ್ಪ, ವೀರಾಂಜನೇಯಲು, ಡಿ. ಮೌನೇಶ್, ಸಿ.ಡಿ. ರಾಜಶೇಖರ, ಅಕ್ಕಿ ಜಿಲಾನ್, ಡಾ. ವೆಂಕಟೇಶ್, ಎನ್. ರಾಮಾಂಜಿನೇಯಲು, ಬಿ. ಜಾಫರ್, ಹೊನ್ನಳ್ಳಿ ಶ್ರೀದೇವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-25-571793053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.