ಕಂಪ್ಲಿ: ಇಲ್ಲಿನ ಕೋಟೆ ಪ್ರದೇಶದ ತುಂಗಭದ್ರಾದೇವಿ ಮೀನುಗಾರರ ಕಾಲೊನಿಯ ಕಾಳಮ್ಮದೇವಿ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ದೇವಿಗೆ ಕಠಿಣ ಹರಕೆ ತೀರಿಸಿದರು.

ತುಂಗಭದ್ರಾ ನದಿ ತೀರದ ಗಂಗಮ್ಮ ಕಟ್ಟೆಯಿಂದ ಆರಂಭಗೊಂಡ ಹರಕೆ ಮೆರವಣಿಗೆಯು ಸುಂಕ್ಲಮ್ಮ ದೇವಸ್ಥಾನ ಬಳಿ ಸಮಾರೋಪಗೊಂಡಿತು.

ಹರಕೆ ಹೊತ್ತ ಪುರುಷರು ಬೆನ್ನು ಹಾಗೂ ಮೊಣಕಾಲಿನ ಹಿಂಭಾಗಕ್ಕೆ ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ಬಿದಿರಿನ ಬೊಂಬುಗಳಿಂದ ನಿರ್ಮಿಸಿದ ಅಟ್ಟದಲ್ಲಿ ನೇತಾಡುತ್ತ ಅಸ್ತ್ರ ಹರಕೆ ತೀರಿಸಿದರು.

ಮೂವರು ಮಹಿಳೆಯರು 12 ಅಡಿ ಉದ್ದದ ತ್ರಿಶೂಲ ಶಸ್ತ್ರವನ್ನು ದವಡೆಯಲ್ಲಿ ಧರಿಸಿದ್ದರು. ಬೆನ್ನಿಗೆ ಎರಡು ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡ ನಾಲ್ವರು ಆಟೊವನ್ನು ಸುಂಕಲಮ್ಮದೇವಿ ದೇವಸ್ಥಾನದವರೆಗೆ ಎಳೆದು ಹರಕೆ ತೀರಿಸಿದರು. ತಮಿಳುನಾಡಿನ ವಾದ್ಯ ಕಲಾವಿದರು ಪಂಬೈ ಮತ್ತು ಡೆಮೈ ವಾದ್ಯ ನುಡಿಸಿದರು.

ಹರಕೆ ಈ ಬಾರಿ ಕಡಿಮೆ: ‘ತಮಿಳು ಮೀನುಗಾರ ಕುಟುಂಬಗಳು ಈ ಉತ್ಸವ ಮತ್ತು ಹರೆಕೆ ತೀರಿಸುವ ಆಚರಣೆ ನಡೆಸುತ್ತಾ ಬಂದಿವೆ. ಈ ಬಾರಿ ಹರಕೆ ತೀರಿಸುವವರ ಸಂಖ್ಯೆ ಕಡಿಮೆಯಿತ್ತು’ ಎಂದು ಸ್ಥಳೀಯರು ಹೇಳುತ್ತಾರೆ.

ಕಂಪ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಂ. ರಾಜೇಶ, ಮಾಜಿ ಅಧ್ಯಕ್ಷ ಎಸ್.ಆರ್. ಚಿನ್ನರಾಜು, ಪ್ರಮುಖರಾದ ಟಿ. ಮಣಿ, ಸ್ವಾಮಿ ದೊರೈ, ಗುರುಮೂರ್ತಿ, ಗಣೇಶ್, ಎಂ. ರಾಜ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-25-591594823

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.