ಕಂಪ್ಲಿ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ 1.87 ಸೆಂ.ಮೀ ಮಳೆಯಾಗಿದ್ದು, 4 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದರೆ, ಗಾಳಿಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಾಗಿವೆ.

ತಾಲ್ಲೂಕಿನ ಎಮ್ಮಿಗನೂರು ಹಾಗೂ ಚಿಕ್ಕಜಾಯಿಗನೂರು ಗ್ರಾಮದಲ್ಲಿ ತಲಾ ಒಂದು ಮತ್ತು ಮೆಟ್ರಿ ಗ್ರಾಮದಲ್ಲಿ ಎರಡು ಕಚ್ಚಾ ಮನೆಗಳು ಭಾಗಶಃ ಬಿದ್ದಿವೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಟ್ಟಣದಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಮಳೆ ಹಿನ್ನೆಲೆ ಬಾಗಿದ್ದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಮುಂದುವರಿದಿತ್ತು.

ಮಳೆಗೆ ತಂಪಾದ ಇಳೆ: ಕೆಲ ದಿನಗಳಿಂದ ಬೇಸಿಗೆ ಬಿಸಿಗೆ ಹೈರಾಣಾಗಿದ್ದ ತಾಲ್ಲೂಕಿನ ಜನರು ಶನಿವಾರ ರಾತ್ರಿ ಸುರಿದ ಮಳೆಯಿಂದ ಇಳೆ ತಂಪಾಗಿ ನಿಟ್ಟುಸಿರುಬಿಟ್ಟಿದ್ದಾರೆ.

ಪ್ರತಿ ದಿನ ಮಳೆ ಬರುವ ಮುನ್ಸೂಚನೆ ಆಕಾಶದಲ್ಲಿ ಕಾಣಿಸಿಕೊಂಡರು ಮಳೆ ಮಾತ್ರ ಬಾರದೆ ರೈತರಿಗೂ ನಿರಾಸೆಯುಂಟು ಮಾಡುತ್ತಿತ್ತು. ಇದೀಗ ಸುರಿದ ಮಳೆಯಿಂದ ಸಂತಸಗೊಂಡಿರುವ ರೈತರು ಕೃಷಿ ಚಟುವಟಿಕೆಗಳನ್ನು ಅಲ್ಲಲ್ಲಿ ಆರಂಭಿಸಿರುವುದು ಕಂಡುಬಂತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-25-789555048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.