ಕಂಪ್ಲಿ: ಇಲ್ಲಿನ ಕೋಟೆ ಪ್ರದೇಶದ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಲಕ್ಷ್ಮಿ ನರಸಿಂಹ ಜಯಂತ್ಯುತ್ಸವ ಅಂಗವಾಗಿ ಲಕ್ಷ್ಮಿ ನರಸಿಂಹ, ಪಟ್ಟಾಭಿರಾಮಚಂದ್ರ ದೇವರಿಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗುರುವಾರ ಭಕ್ತಿಭಾವದಿಂದ ಜರುಗಿದವು.

ಧೀರಣ್ಣ ವೈದ್ಯರು ಲಕ್ಷ್ಮಿ ನರಸಿಂಹ ಮಹಿಮೆ ಕುರಿತು ಉಪನ್ಯಾಸ ನೀಡಿದರು. ಅರ್ಚಕ ರಾಘವೇಂದ್ರಾಚಾರಿ ಗುಡಿ, ಶ್ರೀನಿವಾಸಾಚಾರ್ ರಾಮಾಯಣ ಅವರು ಪೂಜಾ ಕಾರ್ಯಕ್ರಮ ನೇತೃತ್ವ ವಹಿಸಿದ್ದರು.

ವೆಂಕಟರಮಣ ದೇವಸ್ಥಾನ: ಪಟ್ಟಣದ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ನರಸಿಂಹ ಜಯಂತ್ಯುತ್ಸವ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಪ್ರವಚನ ನೀಡಿದರು.

ಆಂಜನೇಯ ದೇವಸ್ಥಾನ: ಪಟ್ಟಣದ ಶ್ರೀಪೇಟೆ ಆಂಜನೇಯ ದೇವಸ್ಥಾನದಲ್ಲಿ ನರಸಿಂಹ ಜಯಂತ್ಯುತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಶಿಲಾಮೂರ್ತಿಯನ್ನು ರಜತ ಕವಚದಿಂದ ಅಲಂಕರಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-25-1436837271

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.