ಕಂಪ್ಲಿ: ಪತಿ, ಅತ್ತೆಯ ಕಿರುಕುಳ ಮತ್ತು ವರದಕ್ಷಿಣೆ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬರು ತವರು ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಪಟ್ಟಣದ 11ನೇ ವಾರ್ಡ್ ತಾಯಮ್ಮನ ಗುಡಿ ಹತ್ತಿರ ಭಾನುವಾರ ನಡೆದಿದೆ.

ಐಶ್ವರ್ಯ(24) ನೇಣಿಗೆ ಶರಣಾದವರು. ಈ ಮಹಿಳೆ ಪ್ರದೀಪಕುಮಾರ್ ಎಂಬುವವರನ್ನು ಪ್ರೀತಿಸಿ ಮನೆಯಲ್ಲಿ ಹೇಳದೆ 2024ರ ಡಿ.26ರಂದು ವಿವಾಹವಾಗಿದ್ದರು. ನಂತರ ವಿಷಯ ತಿಳಿದ ಐಶ್ವರ್ಯಳ ತಂದೆ ಚಂದ್ರಮೌಳಿ ಕುರುಗೋಡು ನೋದಣಿ ಕಚೇರಿಯಲ್ಲಿ 2025ರ ಜ.15ರಂದು ವಿವಾಹ ನೋಂದಣಿ ಮಾಡಿಸಿದ್ದರು.

ಪತಿ ಮನೆಗೆ ಹೋದ ಐಶ್ಚರ್ಯಳಿಗೆ ಅತ್ತೆಯಿಂದ ಕಿರುಕುಳ ಇದ್ದು ಇದಕ್ಕೆ ಪತಿಯೂ ಸಹಮತ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಬೇಸತ್ತು ನೇಣಿಗೆ ಶರಣಾಗಿರುವುದಾಗಿ, ಅಲ್ಲದೆ ತನ್ನ ಮೊಬೈಲ್ ಪೋನ್, ತಾಳಿಯ ಒಂದು ತೊಲೆ ಬಂಗಾರದ ಗುಂಡು ಅಪ್ಪ ಅಮ್ಮ ಕೊಡಿಸಿದ್ದರಿಂದ ಅವರಿಗೇ ಮರಳಿಸುವಂತೆ ಡೆತ್ ನೋಟ್ನಲ್ಲಿ ಬರೆದಿಟ್ಟಿರುವುದಾಗಿ ಮೃತಳ ತಂದೆ ಚಂದ್ರಮೌಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡಿವೈಎಸ್ಪಿ ಪ್ರಸಾದ್ ಗೋಖಲೆ, ಪಿಐ ಕೆ.ಬಿ. ವಾಸುಕುಮಾರ್, ಸುಕೋ (ಸ್ಥಳ ಪರಿಶೀಲನಾಧಿಕಾರಿಗಳು) ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ಮುಂದುವರಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-25-1556557854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.