ಸಿರುಗುಪ್ಪ: ‘ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ದೇವಾಲಯಗಳ ಅರ್ಚಕರ ಸಮಸ್ಯೆಗಳಿಗೆ ಸಂಘವು ಸ್ಪಂದಿಸುತ್ತದೆ’ ಎಂದು ಕರ್ನಾಟಕ ರಾಜ್ಯ ಅರ್ಚಕರ ಸಂಘದ (ಮುಜರಾಯಿ ಇಲಾಖೆ) ರಾಜ್ಯಾಧ್ಯಕ್ಷ ಸಿ.ರಂಗರಾಜನ್ ಹೇಳಿದರು.

ನಗರದ ಪ್ಯಾಟೇ ಅಂಜನೇಯ ದೇವಸ್ಥಾನದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಅರ್ಚಕರ ಸಂಘದ (ಮುಜರಾಯಿ ಇಲಾಖೆ) ಸಮಾರಂಭದಲ್ಲಿ ಮಾತನಾಡಿದರು.

‘ಹಿಂದೂ ದೇವಾಲಯಗಳ ಅರ್ಚಕರು, ಅದರಲ್ಲೂ ಹಳ್ಳಿಗಳಲ್ಲಿರುವ ದೇವಾಲಯಗಳ ಅರ್ಚಕರಿಗೆ ಯಾವುದೇ ದಕ್ಷಿಣೆ ಇರುವುದಿಲ್ಲ, ಅಂತಹ ದಿನಗಳಲ್ಲಿ ದೇವರನ್ನೇ ನಂಬಿಕೊಂಡು ಬದುಕುವ ಅರ್ಚಕರ ಸಮಸ್ಯೆಗಳಿಗೆ ರಾಜ್ಯ ಅರ್ಚಕರ ಸಂಘ ಸ್ಪಂದಿಸುತ್ತದೆ’ ಎಂದರು.

‘ಹಾಳು ಬಿದ್ದ ದೇವಾಲಯಗಳ ಪುನರುತ್ಥಾನ ಮತ್ತು ಅರ್ಚಕರಿಗೆ ವಾಸಿಸಲು ದೇವಾಲಯದ ಹತ್ತಿರ ಮನೆ ನಿರ್ಮಾಣ, ಅರ್ಚಕರಿಗೆ ನೀಡುವ ತಸ್ತೀಕ್ ಮೊತ್ತವನ್ನು ಪ್ರತಿ ವರ್ಷ ನವೀಕರಿಸದೆ ಶಾಶ್ವತವಾಗಿ ಅದನ್ನು ನೀಡಲು ಸರ್ಕಾರಕ್ಕೆ ಮನವಿ ಮತ್ತು ವಂಶ ಪರಂಪರೆಯಾಗಿ ಅರ್ಚಕರಿಗೆ ಗುಡಿ ಪೂಜೆ ಮಾಡುವ ಅಧಿಕಾರ ಮತ್ತು ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಶಿಷ್ಯವೇತನ ನೀಡುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಸಿರುಗುಪ್ಪ ತಾಲ್ಲೂಕು ಅಧ್ಯಕ್ಷ ಕಾಳಪ್ಪ ಆಚಾರಿ, ಕಾರ್ಯದರ್ಶಿ ವೀರೇಶಯ್ಯ ಸ್ವಾಮಿ, ಹಿರಿಯ ಅರ್ಚಕ ಹಚೋಳ್ಳಿ ಪ್ರಭುಸ್ವಾಮಿ, ಹಾಸ್ಯ ಕಲಾವಿದ ಜೆ. ನರಸಿಂಹಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-25-1694970735

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.