ತೆಕ್ಕಲಕೋಟೆ: ‘ಕೆರೆಗಳ ಹೂಳೆತ್ತುವ ಕಾರ್ಯದಿಂದ ನೀರು ಸಂಗ್ರಹ, ಅಂತರ್ಜಲ ಹೆಚ್ಚಳ, ಜಾನುವಾರುಗಳಿಗೆ ಕುಡಿಯುವ ನೀರು ಸಂಗ್ರಹಕ್ಕೆ ಅನುಕೂಲವಾಗಲಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ ಎಸ್ ತಿಳಿಸಿದರು.

ಸಮೀಪದ ಕೊಂಚಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಪುರ ಗ್ರಾಮದ ದಾಸಪುರ ಕೆರೆ ಅಭಿವೃದ್ಧಿ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಯಿತು. ಸಮಿತಿ ಗೌರವ ಅಧ್ಯಕ್ಷ ದೊಡ್ಡ ಮುದುಕಣ್ಣ, ಅಧ್ಯಕ್ಷ ಬುಳ್ಳಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಕೋಶಾಧಿಕಾರಿ ಡಿ. ನಿರುಪಾದಿ, ಸದಸ್ಯರಾಗಿ ಟಿ.ಹನುಮಂತ, ಬಿ. ರುದ್ರಪ್ಪ, ಟಿ. ಚಂದ್ರಪ್ಪ, ಬಸವರಾಜ, ಡಿ. ರುದ್ರಪ್ಪ, ಟಿ. ಕೇಶಪ್ಪ, ಜಿ.ರುದ್ರಪ್ಪ, ಜಿ.ಶೇಖರಪ್ಪ ಅವರನ್ನು ಆಯ್ಕೆಮಾಡಲಾಯಿತು.

ಪಿಡಿಒ ಲೀಲಾವತಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದ್ದು ಸಂತೋಷದ ಸಂಗತಿ’ ಎಂದರು. ಅಭಿಯಂತರ ಸತೀಶ, ಕೃಷಿ ಮೇಲ್ವಿಚಾರಕ ವೀರೇಶ, ವಲಯದ ಮೇಲ್ವಿಚಾರಕ ಶಿವಪ್ಪ ಪೂಜಾರಿ, ಸೇವಾಪ್ರತಿನಿಧಿ ಹೊನ್ನೂರಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-25-360256635

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.