ಕೂಡ್ಲಿಗಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ಚಿಕನ್ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಟೋಟಗೊಂಡು ಅಂಗಡಿ ಮಾಲೀಕ ಸೇರಿದಂತೆ ಸಾರ್ವಜನಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ.

ಎಂದಿನಂತೆ ಕೋಳಿ ಮಾಂಸ ಬೇಯಿಸಲು ಅಂಗಡಿ ಮಾಲೀಕ ಗ್ಯಾಸ್ ಒಲೆ ಹಚ್ಚಿದಾಗ, ಸ್ಟವ್ನಿಂದ ಸಿಲಿಂಡರ್ ಗೆ ಹೋಗಿರುವ ಪೈಪ್ ಹಾಳಾಗಿತ್ತು. ಅದನ್ನು ಗಮನಿಸದ ಅಂಗಡಿ ಮಾಲೀಕ ಒಲೆಗೆ ಬೆಂಕಿ ಹಚ್ಚಿದ ತಕ್ಷಣವೇ ಪೈಪ್ ಮೂಲಕ ಬೆಂಕಿ ಆವರಿಸಿದೆ.

ಇದರಿಂದ ವಿಚಲಿತನಾದ ಮಾಲೀಕ ಅಂಗಡಿಯಿಂದ ಹೊರಗಡೆ ಓಡಿ ಬಂದಿದ್ದಾನೆ. ಇದೇ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ ಪಟ್ಟಣದ ಪೊಲೀಸ್ ಠಾಣೆ ಪಿಎಸ್ಐ ಸಿ.ಪ್ರಕಾಶ್ ಹಾಗೂ ಸಿಬ್ಬಂದಿ ಮಂಜುನಾಥ ತಕ್ಷಣವೇ ಜಾಗೃತರಾಗಿ ಸಾರ್ವಜನಿಕರು ಯಾರು ಆ ಮಾರ್ಗದಲ್ಲಿ ಸಂಚಾರ ಮಾಡದಂತೆ ರಸ್ತೆ ನಿರ್ಭಂದ ಮಾಡಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ನಂತರ ಬೆಂಕಿ ಅಂಗಡಿಯನ್ನು ಆವರಿಸಿ ಸಿಲಿಂಡರ್ ಸ್ಪೋಟವಾಗಿದ್ದು, ಯಾರಿಗೂ ಪ್ರಾಣಾಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-25-624746903

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.