ಕೂಡ್ಲಿಗಿ: ಪಂಪ್ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಷಿಸಿ ರೈತ ಕೆ.ಮಂಜುನಾಥ(36) ಮೃತಪಟ್ಟ ಘಟನೆ ತಾಲ್ಲೂಕಿನ ವಿರುಪಾಪುರ ಗ್ರಾಮದಲ್ಲಿ ನಡೆದಿದೆ.

ವಿರುಪಾಪುರ ಗ್ರಾಮದ ಕೆ. ಮಂಜುನಾಥ ಮಂಗಳವಾರ ಸಂಜೆ ಅಮ್ಮನಕೆರೆ ಕಡೆ ಹೋಗುವ ರಸ್ತೆ ಪಕ್ಕದಲ್ಲಿನ ತಮ್ಮ ಜಮೀನಿನಲ್ಲಿನ ಬೋರ್ವೆಲ್ ಪಂಪ್ಸೆಟ್ನಿಂದ ಟೊಮೆಟೊ ಬೆಳೆಗೆ ನೀರು ಹಾಯಿಸಲು ಹೋಗಿದ್ದಾರೆ. ಈ ವೇಳೆ ಪಂಪ್ಸೆಟ್ ಸ್ಟಾಟರ್ ಬಾಕ್ಸ್ಗೆ ಕಂಬದಿಂದ ಬಂದಂತಹ ವೈರಿನ ಇನ್ಸುಲಿನ್ ಕಿತ್ತುಹೋಗಿದ್ದರಿಂದ ಸ್ಟಾಟರ್ ಬಾಕ್ಸ್ಗೆ ವಿದ್ಯುತ್ ಸಂಪರ್ಕಗೊಂಡಿದೆ. ಇದನ್ನು ಗಮನಿಸದ ಮಂಜುನಾಥ ಬಾಕ್ಸ್ ಮುಟ್ಟಿದಾಗ ಆತನಿಗೆ ವಿದ್ಯುತ್ ಸ್ಪರ್ಶವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರಗೆ ಕರೆ ತರುವ ಮಾರ್ಗ ಮಧ್ಯಲ್ಲಿಯೇ ಮೃತಪಟ್ಟಿದ್ದಾರೆ. ಮೃತ ರೈತನ ತಮ್ಮ ಕೆ. ಕೃಷ್ಣ ನೀಡಿದ ದೂರಿನಂತೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-25-2105167046

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.